ಭದ್ರಾವತಿಯಿಂದ ಮಣಿಪಾಲ್, ಉಡುಪಿಗೆ ಬಸ್ ಬಿಡಿ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ನಗರದ ಬಸ್ ನಿಲ್ದಾಣದಿಂದ ಮಣಿಪಾಲ್, ಉಡುಪಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ನಗರ ಅಭಿವೃದ್ಧಿ ವೇದಿಕೆಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಭದ್ರಾವತಿಯಿಂದ ಮಣಿಪಾಲ್ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಆದರೆ, ಸೂಕ್ತ ಬಸ್ ಸೌಲಭ್ಯವಿಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತಕ್ಕಾಗಿ ಬಸ್ ಸಂಚಾರ ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಯಾವ ಮಾರ್ಗಕ್ಕಾಗಿ ಡಿಮ್ಯಾಂಡ್

  1. ಭದ್ರಾವತಿ ಸಬ್ ಡಿಪೋದಿಂದ ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಮಣಿಪಾಲ್
  2. ಭದ್ರಾವತಿ ಡಿಪೋದಿಂದ ಶಿವಮೊಗ್ಗ, ಆಯನೂರು, ರಿಪ್ಪನ್ ಪೇಟೆ, ಹುಂಚ, ಕೋಣಂದೂರು, ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಮಣಿಪಾಲ್, ಉಡುಪಿ
  3. ಭದ್ರಾವತಿ ಡಿಪೋದಿಂದ ಎನ್.ಆರ್.ಪುರ, ಕೊಪ್ಪ, ಹರಿಹರಪುರ, ಆಗುಂಬೆ ಮಾರ್ಗವಾಗಿ ಮಣಿಪಾಲ್, ಉಡುಪಿ.

ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಜಿ.ಟಿ.ಬಸವರಾಜ್, ಗೌರವಾಧ್ಯಕ್ಷ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹಮೂರ್ತಿ, ಖಜಾಂಚಿ ಹನುಮಂತಯ್ಯ ಉಪಸ್ಥಿತರಿದ್ದರು.

error: Content is protected !!