ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಿ, ಸೋಂಕಿತರಿಗೆ 1 ತಿಂಗಳು ಚಿಕಿತ್ಸೆ ಕಲ್ಪಿಸಿ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ‌ ಏರಿಕೆ ಕಂಡುಬರುತ್ತಿದೆ. ಬರುವ ದಿನಗಳಲ್ಲಿ‌ ಆಗಬಹುದಾದ ಅನಹುತ ತಪ್ಪಿಸಲು ಜಿಲ್ಲೆಯಲ್ಲಿರುವ ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳ ರೂಪದಲ್ಲಿ ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.

READ | ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ, ಜಿಲ್ಲೆಯಲ್ಲಿ ಒಂದೇ ದಿನ 15 ಸಾವು

ಜೋಮ್ ಆ್ಯಪ್ ನಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕೇಂದ್ರಗಳ ಆರಂಭದಿಂದ ಆಸ್ಪತ್ರೆಗಳ ಮೇಲೆ ಹೆಚ್ಚುತ್ತಿರುವ ಒತ್ತಡ ಕಡಿಮೆ ಆಗಲಿದೆ. ಜತೆಗೆ, ಈ ಕೇಂದ್ರಗಳಲ್ಲಿ ಒಂದು ತಿಂಗಳು ಉಚಿತ ಚಿಕಿತ್ಸೆ ನೀಡಬೇಕು ಎಂದು‌ ಒತ್ತಾಯಿಸಿದರು.

READ |`ಸರ್ಕಾರ ಕೂಲಿ ಕಾರ್ಮಿಕರ, ಬೀದಿ ವ್ಯಾಪಾರಿಗಳ ಖಾತೆಗೆ 25 ಸಾವಿರ ರೂ. ಪರಿಹಾರ ನೀಡಲಿ’

ಕಾಲೇಜುಗಳಿಗೆ ರಜೆ ಇರುವುದರಿಂದ ಇದರ ಪ್ರಯೋಜನ ಪಡೆಯುವ ಅವಕಾಶವಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಜಿಲ್ಲೆಯಲ್ಲಿ ಹೇಗಿದ್ದರೂ ರಾಜಕಾರಣಿಗಳದ್ದೇ ಖಾಸಗಿ ಆಸ್ಪತ್ರೆ ಮತ್ತು ಕಾಲೇಜುಗಳಿವೆ. ಅದರ ಪ್ರಯೋಜನವೂ ಪಡೆಯಬಹುದು ಎಂದು ಹೇಳಿದರು.
ಸತ್ಯಾಂಶ ಮರೆಮಾಚುವ ಯತ್ನ | ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದಲೂ ಹಲವರು ಮೃತ ಪಡುತಿದ್ದಾರೆ. ಮಂಗಳವಾರ15 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ಕೈದು ಜನರು ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಉಸ್ತುವಾರಿ ಸಚಿವರು, ಅಧಿಕಾರಿಗಳು ತಪ್ಪು ಮಾಹಿತಿ ನೀಡುತಿದ್ದಾರೆ. ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಟೀಕಿಸಿದರು.
ಬೆಳಗ್ಗೆ 10 ಗಂಟೆಯವರೆಗೆ ಕೊರೊನಾ ವೈರಸ್ ಇರಲ್ವ? | ಬೆಳಗ್ಗೆ 6 ರಿಂದ 10 ರ ವರೆಗೆ ಜನರ‌ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಅವಧಿಯಲ್ಲಿ ಜನ ಕೊರೊನಾ ವೈರಸ್ಸೇ ಇಲ್ಲ ಎಂಬಂತೆ ಓಡಾಡುತಿದ್ದಾರೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
10 ಸಾವಿರ ರೂ. ನೆರವು ನೀಡಿ | ಬಡ ವರ್ಗದ ಜನರಿಗೆ ಸರ್ಕಾರ ಹತ್ತು ಸಾವಿರ ರೂಪಾಯಿ ನೆರವು ನೀಡಬೇಕು ಎಂದು‌ ಒತ್ತಾಯಿಸಿದರು.
ಪಕ್ಷದ ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ಸೌಗಂಧಿಕಾ ರಘುನಾಥ್ , ಎಂ.ಚಂದನ್ ಉಪಸ್ಥಿತರಿದ್ದರು.

https://www.suddikanaja.com/2020/11/30/tb-free-shivamogga/

error: Content is protected !!