ಈಶ್ವರಪ್ಪ ಜನ್ಮದಿನ ಪ್ರಯುಕ್ತ ವೃದ್ಧಾಶ್ರಮಕ್ಕೆ 150 ಕೆಜಿ ಅಕ್ಕಿ ದಾನ ಮಾಡಿದ ಅಭಿಮಾನಿಗಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಪ್ರಯುಕ್ತ ಗುರುವಾರ 150 ಕೆಜಿ ಅಕ್ಕಿಯನ್ನು ದಾನ ಮಾಡಲಾಯಿತು.

kse rice
ಗಾಡಿಕೊಪ್ಪದ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮ ಮತ್ತು ಶಾರದಾ ಅಂಧ ಶಾಲೆಗೆ 150 ಕೆಜಿ ಅಕ್ಕಿಯನ್ನು ಈಶ್ವರಪ್ಪ ಅವರ ಅಭಿಮಾನಿ ಅವಿನಾಶ್ ಎಲ್.ರಾಜ್ ಅವರು ದಾನ ನೀಡಿದರು.

ಇದಕ್ಕೂ ಮುಂಚೆ ಅಭಿಮಾನಿಗಳು ಈಶ್ವರಪ್ಪ ಅವರಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಸಚಿವರು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಈ ವೇಳೆ, ಜಿಲ್ಲಾ ಪಂಚಾಯಿತಿ ಸದಸ್ಯರೂ ಆದ ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್ ಇದ್ದರು. ಅಕ್ಕಿ ವಿತರಣೆ ವೇಳೆ ಗಣೇಶ್, ಪ್ರವೀಣ್, ವಿಜಯ್, ರವಿ ಇತರರು ಉಪಸ್ಥಿತರಿದ್ದರು.

error: Content is protected !!