ಬಾಲಕಿಯ ಮೇಲೆ ಸಾಕು ತಂದೆ ಸೇರಿ ಇಬ್ಬರಿಂದ ಅತ್ಯಾಚಾರ

 

 

ಸುದ್ದಿ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ಸಾಕು ತಂದೆ ಸೇರಿ ಇಬ್ಬರು ಬಾಲಕಿಯ ಮೇಲೆ‌ ಅತ್ಯಾಚಾರ ಎಸಗಿರುವ ಘಟನೆ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
36 ವರ್ಷದ ಸಾಕು ತಂದೆ ಹಾಗೂ ಎದುರುಗಡೆ ಮನೆಯ 46 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೊದಲ ಪತ್ನಿಯನ್ನು ತ್ಯಜಿಸಿ ಕೂಲಿ ಕೆಲಸದ ವೇಳೆ ಪರಿಚಯವಾಗಿದ್ದ ವಿಧವೆಯೊಂದಿಗೆ ವಾಸವಿದ್ದ 36 ವರ್ಷದ ವ್ಯಕ್ತಿ ಕೃತ್ಯ ಎಸಗಿದ್ದಾರೆ. ನಿರಂತರ ಲೈಂಗಿಕ ದೌರ್ಬನ್ಯ ನಡೆಸಿರುವುದು ಗೊತ್ತಾಗಿದೆ.
ಪ್ರಕರಣ ಹೊರಬಿದ್ದಿದ್ದು ಹೇಗೆ?
ಬಾಲಕಿಯಲ್ಲಿ ಕೆಲವು ದೈಹಿಕ ಬದಲಾವಣೆಗಳನ್ನು ಗಮನಿಸಿದ ಶಿಕ್ಷಕಿಯು ಅನುಮಾನಗೊಂಡು ವಿಚಾರಿಸಿದಾಗ ಸತ್ಯಾಂಶ ಗೊತ್ತಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
(ಓದುಗರ ಗಮನಕ್ಕೆ- ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವುದರಿಂದ ನಿಯಮದ ಪ್ರಕಾರ, ಆರೋಪಿ, ಸಂತ್ರಸ್ತೆಯ ಹೆಸರು, ಊರು ಯಾವುದನ್ನೂ ಬಹಿರಂಗ ಪಡಿಸಿಲ್ಲ.)

error: Content is protected !!