ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿಗೆ ಶುಕ್ರವಾರ ಮೂವರು ಮೃತಪಟ್ಟಿದ್ದಾರೆ. ಇಂದು 396 ಮಂದಿಗೆ ಕೊರೊನಾ ದೃಢಪಟ್ಟಿದ್ದು, 711 ಜನ ಗುಣಮುಖರಾಗಿದ್ದಾರೆ.
ಸೋಂಕಿನ ಲಕ್ಷಣವಿರುವ 2,157 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, 1,849 ವರದಿಗಳು ನೆಗೆಟಿವ್ ಇವೆ. ಶಿಕ್ಷಣ ಸಂಸ್ಥೆಯಿಂದ 619 ಮಾದರಿ ಸಂಗ್ರಹಿಸಿದ್ದು 91 ಪಾಸಿಟಿವ್ ಬಂದಿವೆ.
ಕೋವಿಡ್ ಆಸ್ಪತ್ರೆಯಲ್ಲಿ 66 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 23, ಖಾಸಗಿ ಆಸ್ಪತ್ರೆಯಲ್ಲಿ 9, ಟ್ರಯಾಜ್ ನಲ್ಲಿ 16 ಹಾಗೂ ಮನೆ ಆರೈಕೆಯಲ್ಲಿ 2,280 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 189, ಭದ್ರಾವತಿಯಲ್ಲಿ 70, ತೀರ್ಥಹಳ್ಳಿಯಲ್ಲಿ 16, ಶಿಕಾರಿಪುರದಲ್ಲಿ 32, ಸಾಗರದಲ್ಲಿ 33, ಹೊಸನಗರದಲ್ಲಿ 19, ಸೊರಬದಲ್ಲಿ 26, ಬಾಹ್ಯ ಜಿಲ್ಲೆಯ 11 ಮಂದಿಗೆ ಸೋಂಕು ತಗುಲಿದೆ.