ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆಗೆ ಬ್ರೇಕ್ ಬಿದ್ದಿದೆ. ಸೋಮವಾರ ನಾಲ್ಕು ಜನ ಮೃತಪಟ್ಟಿದ್ದಾರೆ.
ಇಂದು 4,348 ಗಂಟಲು ದ್ರವದ ಮಾದರಿಗಳನ್ನು ಪಡೆಯಲಾಗಿದೆ. 3,717 ಮಂದಿಯ ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
https://www.suddikanaja.com/2021/01/25/dial-112-launched-by-shivamogga-police-department/
399 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 19 ವಿದ್ಯಾರ್ಥಿಗಳು, ಮೂವರು ಸಿಬ್ಬಂದಿ ಇದ್ದಾರೆ.
ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 610 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ | ಕೊರೊನಾ ಪಾಸಿಟಿವಿಟಿ ದರ ದಿನೇ ದಿನೆ ಇಳಿಕೆಯಾಗುತ್ತಿದೆ. ಹೀಗಾಗಿ, ಸಕ್ರಿಯ ಪ್ರಕರಣಗಳು ಇಳಿಕೆಯಾಗಿವೆ. ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ 580, ಡಿಸಿಎಚ್ಸಿನಲ್ಲಿ 234, ಕೋವಿಡ್ ಕೇರ್ ಸೆಂಟರ್ನಲ್ಲಿ 1,531, ಖಾಸಗಿ ಆಸ್ಪತ್ರೆಯಲ್ಲಿ 1,019, ಹೋಮ್ ಐಸೋಲೇಷನ್ನಲ್ಲಿ 1,007 ಹಾಗೂ ಟ್ರಿಯೇಜ್ನಲ್ಲಿ 605 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 4,976 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ 128, ಭದ್ರಾವತಿ 87, ತೀರ್ಥಹಳ್ಳಿ 47, ಶಿಕಾರಿಪುರ 52, ಸಾಗರ 39, ಹೊಸನಗರ 11, ಸೊರಬ 23, ಬಾಹ್ಯ ಜಿಲ್ಲೆಯ 12 ಮಂದಿಗೆ ಕೊರೊನಾ ತಗುಲಿದೆ.
https://www.suddikanaja.com/2020/12/12/fraud-in-the-name-of-jan-dhan-scheme-in-bengaluru/