ವಾರೆಂಟ್ ನೀಡಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಬೈಕಿನ ಗಾಜು ನುಂಗಿದ ಆರೋಪಿ ಆಸ್ಪತ್ರೆಗೆ ದಾಖಲು

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಆರೋಪಿಗೆ ನ್ಯಾಯಾಲಯದಿಂದ ಜಾರಿಯಾಗಿದ್ದ ವಾರೆಂಟ್ ನೀಡಲು ಹೋದಾಗ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ಮಾಡಿ ತಾನು ಗಾಜು ನುಂಗಿದ ಘಟನೆ ಬುಧವಾರ ಸಂಭವಿಸಿದೆ.

https://www.suddikanaja.com/2021/07/16/accident-woman-died/

ವಿನೋಬನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಂಜುನಾಥ್(34) ಎಂಬುವವರ ಮೇಲೆ ಆರೋಪಿ ರೂಪೇಶ್ ಹಲ್ಲೆ ಮಾಡಿದ್ದಾನೆ. ಈತನ ವಿರುದ್ಧ ಐಪಿಸಿ ಕಲಂ 397 ಅಡಿ‌ ಪ್ರಕರಣ ದಾಖಲಾಗಿದೆ.
ಸಿಬ್ಬಂದಿಯನ್ನು ಚರಂಡಿಗೆ ತಳ್ಳಿದ ರೂಪೇಶ್
ಚಿಕ್ಕಮಗಳೂರು ಮೂಲದ ಆರೋಪಿ ರೂಪೇಶ್ ಎಂಬಾತನೇ ಪೊಲೀಸ್ ಸಿಬ್ಬಂದಿಯ ಮೇಲೆ‌ ಹಲ್ಲೆ ಮಾಡಿದ್ದಾನೆ.‌ ನಗರದ ಶುಭ ಮಂಗಳ ಕಲ್ಯಾಣ ಮಂಟಪದ ಬಳಿ ರೂಪೇಶ್ ಅವರನ್ನು ಕಂಡಿದ್ದ ಸಿಬ್ಬಂದಿ ಮಂಜುನಾಥ್ ಅವರು ಆತನನ್ನು ನಿಲ್ಲುವಂತೆ ಸೂಚಿಸಿದ್ದಾರೆ.

ಪೊಲೀಸರ ಕೈಗೆ ಸಿಗಬಾರದು ಎಂಬ ಉದ್ದೇಶದಿಂದ ಮಂಜುನಾಥ್ ಅವರನ್ನು ಪಕ್ಕದ ಚರಂಡಿಗೆ ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲಿಯೇ ಇನ್ನಿತರ ಪೊಲೀಸ್ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಆಗ ರೂಪೇಶ್ ಬೈಕಿನ ಗಾಜು ಒಡೆದು ಅದರಿಂದ ಬೆದರಿಸಿದ್ದಾನೆ.‌ ನಂತರ, ಅದೇ ಗಾಜನ್ನು ನುಂಗಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು‌ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೂಪೇಶ್ ಗಾಜು‌ ನುಂಗಿರುವುದರಿಂದ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುತ್ತಿದೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/05/20/dead-body-changed-in-mortuary/

error: Content is protected !!