BREAKING NEWS | ತುಂಗಾ ಹೊಳೆ ಬೆಂಕಿ ಅನಾಹುತ, ಸುಟ್ಟು ಭಸ್ಮವಾದ ಸ್ಮಾರ್ಟ್ ಸಿಟಿಗೆ ಸೇರಿದ 60 ಲಕ್ಷ ಮೌಲ್ಯದ ಕೇಬಲ್ಸ್

 

 

ಸುದ್ದಿ ಕಣಜ.ಕಾಂ | CITY | FIRE ACCIDENT 
ಶಿವಮೊಗ್ಗ: ನಗರದ ತುಂಗಾ ಹೊಳೆಯ ಬೈಪಾಸ್ ಸೇತುವೆ ಬಳಿ ಕೇಬಲ್ ಬಂಡಲ್ ಗೆ ಬೆಂಕಿ ತಾಕಿದ್ದು ಲಕ್ಷಾಂತರ ಮೌಲ್ಯದ ಕೇಬಲ್ ಗಳು ಸುಟ್ಟು ಭಸ್ಮವಾಗಿವೆ.
ಸ್ಮಾರ್ಟ್ ಸಿಟಿಗೆ ಸೇರಿದೆ ಎನ್ನಲಾದ 65 ಕೇಬಲ್ ಬಂಡಲ್ ಗಳಿಗೆ ಬೆಂಕಿ ಬಿದ್ದಿದ್ದು ಅಂದಾಜು 60 ಲಕ್ಷ ರೂಪಾಯಿ ಮೌಲ್ಯದ ಕೇಬಲ್ ಸುಟ್ಟಿವೆ.

ಬೆಂಕಿ ಅನಾಹುತದ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ (VIDEO REPORT)

ಶನಿವಾರ ಏಕಾಏಕಿ ಕೇಬಲ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟ ನೀಡಿ ಬೆಂಕಿ ನಂದಿಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಗೆ ಜೋರಾಗಿದ್ದರಿಂದ ಕೇಬಲ್ ಗಳು ಸುಟ್ಟ ಕರಕಲಾಗಿವೆ. ಅಗ್ನಿಶಾಮಕದ ದಳದ ಡಿಎಫ್.ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್, ಆರ್.ಎಫ್.ಒ ಲಕ್ಕಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!