ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಜಿಲ್ಲೆಗೆ ಕಾಲಿಟ್ಟು ದಿನದಿಂದ ಸೋಂಕಿತರ ಒಂದೇ ದಿನ ಕೇವಲ ಆರು ಪ್ರಕರಣ ಪಾಸಿಟಿವ್ ಬಂದಿರುವುದು ಇದೇ ಮೊದಲು. ಇಂದೂ ಸಹ ಯಾವುದೇ ಸಾವು ಸಂಭವಿಸಿಲ್ಲ. 16 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ 14 ಜನರಿದ್ದಾರೆ. 45 ಮಂದಿ ಮನೆಯ ಆರೈಕೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 115 ಸಕ್ರಿಯ ಪ್ರಕರಣಗಳಿವೆ. ಸೋಮವಾರದಂದು 2384 ಜನರ ಗಂಟಲು ದ್ರವದ ಮಾದರಿ ಯನ್ನು ಸಂಗ್ರಹಿಸಲಾಗಿದೆ. 1052 ವರದಿಗಳು ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗ 2, ಭದ್ರಾವತಿ 1, ತೀರ್ಥಹಳ್ಳಿ 0, ಸೊರಬ 0, ಸಾಗರ 1, ಶಿಕಾರಿಪುರ 2, ಹೊಸನಗರ 0 ಪ್ರಕರಣ ದೃಢಪಟ್ಟಿವೆ.