ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ ಏರಿಕೆಯಾಗಿದೆ. 100ರ ಗಡಿಗೆ ತಲುಪಿದ್ದ ಸೋಂಕಿತರ ಸಂಖ್ಯೆ ಮತ್ತೆ ಮೇಲ್ಮುಖವಾಗಿ ಚಲಿಸುತ್ತಿದೆ. ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ 124 ಸಕ್ರಿಯ ಪ್ರಕರಣಗಳಿವೆ. ಶನಿವಾರ ಹೊಸದಾಗಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 9 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 13, ಭದ್ರಾವತಿ 6, ಶಿಕಾರಿಪುರ 0, ತೀರ್ಥಹಳ್ಳಿ 2, ಸೊರಬ 2, ಸಾಗರ 1 ಮತ್ತು ಹೊಸನಗರ ತಲಾ 1 ಪ್ರಕರಣ ದೃಢಪಟ್ಟಿವೆ.
ಶನಿವಾರ 1408 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 1725 ನೆಗೆಟಿವ್ ಬಂದಿವೆ. ಪ್ರಸಕ್ತ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 55, ಖಾಸಗಿ ಆಸ್ಪತ್ರೆಯಲ್ಲಿ 10 ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಜನ ಮನೆ ಆರೈಕೆಯಲ್ಲಿದ್ದಾರೆ.