ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸಕ್ತ ಜಿಲ್ಲೆಯಲ್ಲಿ 110 ಇದೆ. ಎರಡಂಕಿಗೆ ಇಳಿದಿದ್ದ ಕೊರೊನಾ ಮತ್ತೆ ಏರಿಕೆ ಕಂಡಿದೆ.
ಮಂಗಳವಾರ ಹೊಸದಾಗಿ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 10 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯ ತನಕ ಒಟ್ಟು 348 ಜನರ ಪ್ರಾಣವನ್ನು ಕೊರೊನಾ ಹರಣ ಮಾಡಿದೆ.
ಸಂಸ್ಕೃತ ಮೂಲಮಂತ್ರದ ಕೆಲ ಅಕ್ಷರಗಳನ್ನೇ ಬದಲಿಸಿದ ಕುವೆಂಪು ವಿವಿ!
ತಾಲೂಕುವಾರು ವರದಿ: ಶಿವಮೊಗ್ಗ 6, ಭದ್ರಾವತಿ 4, ಶಿಕಾರಿಪುರ 0, ತೀರ್ಥಹಳ್ಳಿ 1, ಸೊರಬ 1, ಸಾಗರ 0, ಹೊಸನಗರ 0 ಪ್ರಕರಣ ದೃಢಪಟ್ಟಿದೆ.
ಇಂದು ಅತಿ ಹೆಚ್ಚು 3779 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, 1228 ವರದಿಗಳು ನೆಗೆಟಿವ್ ಬಂದಿವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮೆಗ್ಗಾನ್ 46, ಖಾಸಗಿ ಆಸ್ಪತ್ರೆಯಲ್ಲಿ 9, ಹೋಂ ಐಸೋಲೇಷನ್ 55 ಸೇರಿ 110 ಸಕ್ರಿಯ ಪ್ರಕರಣಗಳಿವೆ.