ಸುದ್ದಿ ಕಣಜ.ಕಾಂ
ಬೆಂಗಳೂರು: ರಾಕಿ ಭಾಯ್ ಯಶ್ ಕುಟುಂಬದ ಜತೆ ಮಾಲ್ಡೀವ್ಸ್ ಟ್ರಿಪ್ಗೆ ಹೋಗಿದ್ದಾರೆ. ಫ್ಯಾಮಿಲಿ ಟ್ರಿಪ್ ನಲ್ಲಿರುವ ರಾಕಿಂಗ್ ಸ್ಟಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅನುಭವ ಮತ್ತು ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿದ್ದ ಯಶ್ ಕುಟುಂಬದೊಂದಿಗೆ ಟೈಂ ಸ್ಪೆಂಡ್ ಮಾಡಲು ಆಗಿರಲಿಲ್ಲ. ಇನ್ನೇನು ಚಿತ್ರದ ಟೀಸರ್ ಬಿಡುಗಡೆಗೊಂಡು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆಯೇ ಕುಟುಂಬಕ್ಕೆ ಸಮಯ ನೀಡಿದ್ದಾರೆ.
ಯಶ್, ರಾಧಿಕಾ ಮತ್ತು ಮಕ್ಕಳು ಸೆಲೆಬ್ರಿಟಿಗಳ ನೆಚ್ಚಿನ ತಾಣವಾದ ಮಾಲ್ಡೀವ್ಸ್ ನಲ್ಲಿ ಸಂತೃಪ್ತಿಯಿಂದ ಸಮಯ ಕಳೆಯುತ್ತಿದ್ದಾರೆ. ಕುಟುಂಬದೊಂದಿಗೆ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಲೈಕ್, ಕಮೆಂಟ್ ಮಾಡಿದ್ದು, ರಾಕಿ ಭಾಯ್ ಗೆ ಶುಭ ಕೋರಿದ್ದಾರೆ.
‘If there was a tropical paradise.. then this would be it!! Maldives.. here we come!!’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮಕ್ಕಳೊಂದಿಗೆ ಆಟವಾಡಿ, ಪತ್ನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.