ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಜನೂರು ಜಲಾಶಯದಲ್ಲಿ ಬರೋಬ್ಬರಿ 53 ಕೆಜಿ ಬೃಹತ್ ಗಾತ್ರದ ಸುರಗಿ ಮೀನು ಸಿಕ್ಕಿದ್ದು, ಜನ ಅಚ್ಚರಿಯಿಂದ ಅದನ್ನು ವೀಕ್ಷಿಸಿದರು.
ನಿತ್ಯದಂತೆ ಮೀನು ಹಿಡಿಯಲು ಹೋಗಿದ್ದ ಮೀನುಗಾರರ ಬಲೆಗೆ ಈ ಬೃಹತ್ ಕಾಯದ ಮೀನು ಸಿಕ್ಕಿದೆ. ಭಾರಿ ಕಷ್ಟಪಟ್ಟು ಅದನ್ನು ತೆಪ್ಪಕ್ಕೆ ಹಾಕಿಕೊಂಡು ಮಾರುಕಟ್ಟೆಗೆ ತಂದಿದ್ದಾರೆ. ಅದನ್ನು ನೋಡುವುದಕ್ಕೆ ಸಾಕಷ್ಟು ಜನ ಸೇರಿದ್ದರು. ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.