ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಅಟ್ಟಹಾಸ ಮತ್ತೆ ಶುರುವಾಗಿದೆ. ಮೂರು ತಿಂಗಳ ಬಳಿಕ 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಮೂಲದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.
46 ಜನರಿಗೆ ಪಾಸಿಟಿವ್ | ಜಿಲ್ಲೆಯಲ್ಲಿ 14 ವಿದ್ಯಾರ್ಥಿಗಳು ಸೇರಿ 46 ಜನರಿಗೆ ಸೋಂಕು ತಗಲಿದೆ. ಇದುವರೆಗೆ 297 ಸಕ್ರಿಯ ಪ್ರಕರಣಗಳು ಇವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 135, ಖಾಸಗಿ ಆಸ್ಪತ್ರೆಯಲ್ಲಿ 35, ಹೋಮ್ ಐಸೋಲೇಷನ್ ನಲ್ಲಿ 127 ಜನರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 24, ಭದ್ರಾವತಿ 3, ಶಿಕಾರಿಪುರ 2, ತೀರ್ಥಹಳ್ಳಿ 3, ಸೊರಬ 3, ಹೊಸನಗರ 2, ಸಾಗರ 8, ಬೇರೆ ಜಿಲ್ಲೆಯ 1 ಪ್ರಕರಣಗಳು ದೃಢಪಟ್ಟಿವೆ.