ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಾಹನ ಯಾವುದೇ ಆಗಿರಲಿ ಅನಗತ್ಯವಾಗಿ ಓಡಾಡುವುದು ಕಂಡುಬಂದರೆ ಕೇಸ್ ಬೀಳುವುದಂತೂ ಪಕ್ಕಾ. ಬುಧವಾರವೊಂದೇ ದಿನ ಜಿಲ್ಲೆ ಇಂತಹ 247 ಪ್ರಕರಣಗಳು ದಾಖಲಾಗಿವೆ.
READ | ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಿ, ಸೋಂಕಿತರಿಗೆ 1 ತಿಂಗಳು ಚಿಕಿತ್ಸೆ ಕಲ್ಪಿಸಿ
71 ದ್ವಿ ಚಕ್ರ ವಾಹನಗಳು, 21 ಆಟೋಗಳು ಮತ್ತು 9 ಕಾರುಗಳು ಸೇರಿ ಒಟ್ಟು 101 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು ಪ್ರಕರಣಗಳನ್ನು ದಾಖಲಿಸಿ 1,09,500 ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಅಂಗಡಿಗಳ ಮೇಲೆ ನಾಲ್ಕು ಪ್ರಕರಣ ದಾಖಲು | ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ.
ರಿಪ್ಪನ್ ಪೇಟೆ ಠಾಣೆಯಲ್ಲಿ 1, ಹೊಸನಗರ ಠಾಣೆಯಲ್ಲಿ 1 ಮತ್ತು ಓಲ್ಡ್ ಟೌನ್ ಭದ್ರಾವತಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳನ್ನು ದಾಖಲಿಸಲಾಗಿದೆ.