BREAKING NEWS | ಶಿವಮೊಗ್ಗಕ್ಕೆ ಇಂದು ಕೊರೊನಾ ಕೊಂಚ ರಿಲೀಫ್, ಸಾವಿನ ಸಂಖ್ಯೆಯಲ್ಲೂ ಇಳಿಕೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಶಿವಮೊಗ್ಗಕ್ಕೆ ಆಘಾತ ನೀಡಿದೆ. ಆದರೆ, ಗುರುವಾರ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ.

https://www.suddikanaja.com/2020/11/14/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%85%e0%b2%aa%e0%b2%98%e0%b2%be%e0%b2%a4/

ಇಂದು 1,056 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 55 ವಿದ್ಯಾರ್ಥಿಗಳು, 9 ಕಾಲೇಜು ಸಿಬ್ಬಂದಿ ಕೂಡ ಇದ್ದಾರೆ. 436 ಜನ ಗುಣಮುಖರಾಗಿದ್ದಾರೆ. ಹತ್ತು ಜನ ಮೃತಪಟ್ಟಿದ್ದಾರೆ.
2,158 ಜನರ ಮಾದರಿ ಸಂಗ್ರಹ‌ ಮಾಡಲಾಗಿದೆ. 1,480 ನೆಗೆಟಿವ್ ಬಂದಿವೆ.
ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 7,134ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 570, ಡಿಸಿಎಚ್‌ಸಿನಲ್ಲಿ 356, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 320, ಖಾಸಗಿ ಆಸ್ಪತ್ರೆಯಲ್ಲಿ 490, ಹೋಂ ಐಸೋಲೇಷನ್‌ ನಲ್ಲಿ 4,596, ಟ್ರಿಯೇಜ್‌ ನಲ್ಲಿ 802 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ‌ 294 ಭದ್ರಾವತಿ 277, ಶಿಕಾರಿಪುರ 75, ತೀರ್ಥಹಳ್ಳಿ 47, ಸೊರಬ 102, ಸಾಗರ 169, ಹೊಸನಗರ 68, ಬಾಹ್ಯ ಜಿಲ್ಲೆಯ 24 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/04/30/covid-desth-case-increase-in-shivamogga/

error: Content is protected !!