ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಂತೂ ಎಂಟು ತಿಂಗಳ ಬಳಿಕ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 100ಕ್ಕೆ ಇಳಿದಿದೆ. ಬುಧವಾರ ಹೊಸದಾಗಿ 18 ಜನರಿಗೆ ಸೋಂಕು ತಗಲಿದೆ. ಚಿಕಿತ್ಸೆ ಪಡೆದು 25 ಜನ ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಗಂಟಲು ದ್ರವದ ಸಂಗ್ರಹ ಮತ್ತು ಪರೀಕ್ಷೆ ಕಾರ್ಯ ನಿರಂತರವಾಗಿ ಸಾಗಿದೆ. ಇಂದು 2186 ಜನ ಮಾದರಿ ಸಂಗ್ರಹ ಮಾಡಿದ್ದು, 2083 ಜನರ ವರದಿ ನೆಗೆಟಿವ್ ಬಂದಿದೆ. 7198 ಕಂಟೈನ್ಮೆಂಟ್ ಗುರುತಿಸಿದ್ದು, ಅದರಲ್ಲಿ 6507 ಕೈಬಿಡಲಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 38 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 13 ಮತ್ತು ಮನೆ ಆರೈಕೆಯಲ್ಲಿ 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕುವಾರು ವರದಿ: ಶಿವಮೊಗ್ಗ 9, ಭದ್ರಾವತಿ 3, ಶಿಕಾರಿಪುರ 1, ತೀರ್ಥಹಳ್ಳಿ 3, ಸೊರಬ 0, ಸಾಗರ 1, ಹೊಸನಗರ 1.