ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಬುಧವಾರ ಕೊರೊನಾ ಸೋಂಕು ನೂರು ದಾಟಿದೆ.
ಶಿವಮೊಗ್ಗದಲ್ಲಿ 170, ಭದ್ರಾವತಿ 112, ತೀರ್ಥಹಳ್ಳಿ 37, ಶಿಕಾರಿಪುರ 52, ಸಾಗರ 47, ಹೊಸನಗರ 32, ಸೊರಬ 30, ಬಾಹ್ಯ ಜಿಲ್ಲೆಯ 14 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಬುಧವಾರದಂದು 494 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 27 ವಿದ್ಯಾರ್ಥಿಗಳು ಮತ್ತು 4 ಜನ ಸಿಬ್ಬಂದಿ ಇದ್ದಾರೆ. 605 ಜನ ಗುಣಮುಖರಾಗಿದ್ದಾರೆ. 9 ಜನ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 510, ಡಿಸಿಎಚ್ಸಿನಲ್ಲಿ 282, ಕೋವಿಡ್ ಕೇರ್ ಸೆಂಟರ್ನಲ್ಲಿ 1,796, ಖಾಸಗಿ ಆಸ್ಪತ್ರೆಯಲ್ಲಿ 1,153, ಹೋಮ್ ಐಸೋಲೇಷನ್ ನಲ್ಲಿ 1,466, ಟ್ರಿಯೇಜ್ ನಲ್ಲಿ 698 ಜನರಿದ್ದಾರೆ. ಪ್ರಸ್ತುತ 5,905 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.