BREAKING NEWS | ಮೀನು ಹಿಡಿಯಲು ಹೋಗಿ ತುಂಗಾ ನದಿಗೆ ಬಿದ್ದು ಯುವಕ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೀನು ಹಿಡಿಯವಾಗ ಆಯ ತಪ್ಪಿ ತುಂಗಾ ನದಿಗೆ ಬಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಆತನ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.

ತುಂಗಾ ನದಿಯಲ್ಲಿ ಬಿದ್ದ ಯುವಕನ ಶವ ಹೊರ ತೆಗದ ಅಗ್ನಿಶಾಮಕ ದಳದ ಕಾರ್ಯಾಚರಣೆ ಹೇಗಿತ್ತು ಗೊತ್ತಾ? ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ ⇓

ಚಿತ್ರದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ನವೀನ್ (32) ಎಂಬುವವರು ಮೃತಪಟ್ಟಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಈತ ಇತರ ಕೆಲಸಗಾರರೊಂದಿಗೆ ಮಂಗಳವಾರ ರಜೆ ಕಾರಣಕ್ಕಾಗಿ ತುಂಗಾ ನದಿಗೆ ಬಂದಿದ್ದಾನೆ. ಮೀನು ಹಿಡಿಯುವುದಕ್ಕೆ ಮುಂದಾಗಿದ್ದು ನದಿಗೆ ಬಿದಿದ್ದು, 10-15 ಅಡಿ ಆಳವಿದ್ದ ಕಾರಣ ಆತ ಮೇಲೆ ಬರಲಾಗದೇ ಮೃತಪಟ್ಟಿದ್ದಾನೆ.

https://www.suddikanaja.com/2020/11/14/girl-found-dead-in-tunga-river-shivamogga/

ಮಧ್ಯಾಹ್ನ ನದಿಗೆ ಬಿದ್ದಿದ್ದೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ತಕ್ಷಣ ಆಗಮಿಸಿದ ಸಿಬ್ಬಂದಿ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೋಟ್ ಸಹಾಯದಿಂದ ಶವವನ್ನು ಹೊರಗೆ ತೆಗೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಠಾಣಾಧಿಕಾರಿ ಕೆ.ಎನ್. ಪ್ರವೀಣ್, ಕೋಟೆ ಠಾಣೆ ಸಿಇಐ ಚಂದ್ರಶೇಖರ್ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಭಾಗಿಯಾಗಿದ್ದರು.

https://www.suddikanaja.com/2020/11/13/young-woman-slipped-into-the-tunga-river-by-a-moving-janshatabdi-train/

error: Content is protected !!