ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಳಗುಪ್ಪ ಸಮೀಪ ಭಾರೀ ಮಳೆಗೆ ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.
READ | ತಾಳಗುಪ್ಪ ಬಳಿ ಜಲಾವೃತಗೊಂಡ ರೈಲ್ವೆ ಹಳಿ, ರೈಲು ಸಂಚಾರ ಸ್ಥಗಿತ ಸಾಧ್ಯತೆ?
ತಾಳಗುಪ್ಪದಿಂದ ಶುಕ್ರವಾರ ರಾತ್ರಿ ಸಂಚರಿಸಬೇಕಾದ 06228 ರೈಲು ಸಂಚಾರವನ್ನು ರದ್ದು ಪಡಿಸಲಾಗಿದೆ.
ರೈಲು ಸಂಖ್ಯೆ 06529 ಬೆಂಗಳೂರು – ತಾಳಗುಪ್ಪ ಇಂಟರ್ಸಿಟಿ ರೈಲು ಶಿವಮೊಗ್ಗದಲ್ಲೇ ನಿಲುಗಡೆ ಮಾಡಲಿದೆ. ಅದು ತಾಳಗುಪ್ಪವರೆಗೆ ಸಂಚರಿಸುವುದಿಲ್ಲ. ನಂತರ, ಜುಲೈ 24ರಂದು ಅದೇ ರೈಲು ಸಂಖ್ಯೆ 06530 ಶಿವಮೊಗ್ಗ ನಗರದಿಂದ ಹೊರಟು ಬೆಂಗಳೂರಿಗೆ ಪ್ರಯಾಣಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.