ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬುಧವಾರ ಭಾರಿ ಇಳಿಕೆಯಾಗಿದೆ. ಅದರಲ್ಲೂ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸೋಂಕಿಗೆ ಬ್ರೇಕ್ ಬಿದ್ದಿದೆ.
https://www.suddikanaja.com/2021/03/06/issuru-dange-dead/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 15, ಭದ್ರಾವತಿ 10, ತೀರ್ಥಹಳ್ಳಿ 7, ಶಿಕಾರಿಪುರ 4, ಸಾಗರ 8, ಹೊಸನಗರ 2, ಸೊರಬ 1, ಬಾಹ್ಯ ಜಿಲ್ಲೆಯ ಇಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲಾಡಳಿತ ಬುಧವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 49 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 144 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 1 ಜನ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,657 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 4,904 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 118 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 64, ಕೋವಿಡ್ ಕೇರ್ ಸೆಂಟರ್ ನಲ್ಲಿ 93, ಖಾಸಗಿ ಆಸ್ಪತ್ರೆಯಲ್ಲಿ 66, ಹೋಮ್ ಐಸೋಲೇಷನ್ ನಲ್ಲಿ 392 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 29 ಸೋಂಕಿತರಿದ್ದಾರೆ. 762ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/06/17/corona-positivity-decline/