ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಕಾರಣಕ್ಕೆ ಶಿವಮೊಗ್ಗದ ಹಣ್ಣಿನ ವ್ಯಾಪಾರಿಯೊಬ್ಬನ ಮೇಲೆ ಅತ್ಯಾಚಾರ, ಅಟ್ರಾಸಿಟಿ ಹಾಗೂ ಪೋಕ್ಸೊ ಕಾಯಿದೆ ಅಡಿ ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ಬಂಧಿಸಲಾಗಿದೆ.
https://www.suddikanaja.com/2021/03/22/trap-to-protect-mango-crops-from-fruit-flies/
ನ್ಯಾಮತಿ ತಾಲೂಕಿನ ಬಾಲಕಿಯೊಂದಿಗೆ ವಿವಾಹವಾಗಿ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂಬ ಕಾರಣಕ್ಕೆ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
2 ವರ್ಷದ ಲವ್ ಸ್ಟೋರಿ | ಎರಡು ವರ್ಷಗಳ ಹಿಂದೆ ಅಪ್ರಾಪ್ತೆಯ ತಾಯಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ವೇಳೆ, ಹಣ್ಣುಗಳನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಬರುತ್ತಿದ್ದಾಗ ಹಣ್ಣು ವ್ಯಾಪಾರಿ ಹಾಗೂ ಅಪ್ರಾಪ್ತೆ ಚೆನ್ನಾಗಿ ಪರಿಚಯವಾಗಿದ್ದಾರೆ. ತಾಯಿ ಮೃತಪಟ್ಟ ಬಳಿಕ ಅಪ್ರಾಪ್ತೆಯು ವಾಪಸ್ ಊರಿಗೆ ಹೋಗಿದ್ದಾಳೆ. ಆಗ ಮದುವೆ ಮಾಡುವುದಕ್ಕಾಗಿ ಆಕೆಯ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವಿಚಾರವನ್ನು ಹಣ್ಣಿನ ವ್ಯಾಪಾರಿಗೆ ತಿಳಿಸಿದ್ದು, ಆತ ಶಿವಮೊಗ್ಗಕ್ಕೆ ಬರುವಂತೆ ತಿಳಿಸಿದ್ದಾನೆ. ಅದರಂತೆ, ಆಕೆ ಇಲ್ಲಿಗೆ ಬಂದಿದ್ದಾಳೆ. ನಂತರ, ವಿವಾಹವೂ ಆಗಿದ್ದಾರೆ ಎಂದು ತಿಳಿದುಬಂದಿದೆ.
https://www.suddikanaja.com/2021/07/03/sexual-harassment-on-girl/