ಸುದ್ದಿ ಕಣಜ.ಕಾಂ | DISTRICT | ENTERTAINMENT
ಶಿವಮೊಗ್ಗ: ಪೃಥ್ವಿಗೌಡ ಕ್ರಿಯೇಷನ್ಸ್ ವತಿಯಿಂದ 75 ಅನಿವಾಸಿ ಭಾರತೀಯರು ಪಾಲ್ಗೊಂಡು ಹಾಡಿರುವ ವಂದೇ ಮಾತರಂ ವಿಡಿಯೋ ಆಲ್ಬಂ ಆಗಸ್ಟ್ 15 ರಂದು ಬೆಳಗ್ಗೆ 11.30ಗಂಟೆಗೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಗಾಯಕ ವಿನಯ್ ಶಿವಮೊಗ್ಗ ಹೇಳಿದರು.
ಆಗಸ್ಟ್ 2ರಿಂದ `ಶಿಕ್ಷಕ ಮಿತ್ರ’ ತಂತ್ರಾಂಶ ಬಳಕೆಗೆ ಖಡಕ್ ವಾರ್ನಿಂಗ್, ಶಿಕ್ಷಕರ ಯಾವ್ಯಾವ ಸೌಲಭ್ಯ ಇಲ್ಲಿ ಲಭ್ಯ?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ದಿನದ ವಜ್ರಮಹೋತ್ಸವ ಆಚರಿಸುತ್ತಿರುವ ಸಂಭ್ರಮದಲ್ಲಿ ಪೃಥ್ವಿಗೌಡ ಕ್ರಿಯೇಷನ್ಸ್ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ ಎಂದರು.
ವಂದೇ ಮಾತರಂ ರಾಷ್ಟ್ರಗಾನವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿರುವ 75 ಅನಿವಾಸಿ ಹಾಡಿದ್ದಾರೆ.
ರಾಷ್ಟ್ರಗಾನಕ್ಕೆ ಸಂಗೀತ ಕಲಾವಿದರಾದ ದೀಪಕ್ ಜಯಶೀಲನ್, ವಿಠ್ಠಲ್ ರಂಗದೋಳ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಚಿನ್ನು ಅವರು ಪ್ರಮೋಷನಲ್ ವೀಡಿಯೋ ಮಾಡಿದ್ದು, ಅವಿನಾಶ್ ಪ್ರಚಾರಕ್ಕಾಗಿ ಪೋಸ್ಟರ್ ತಯಾರಿಸಿ ಸಹಕಾರ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಚೊಚ್ಚಲ ಪ್ರಯತ್ನ
75 ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ಅವರು ಹಾಡಿದ ವೀಡಿಯೋ ತುಣುಕುಗಳನ್ನು ಸಂಗ್ರಹಿಸಿ ವಂದೇ ಮಾತರಂ ಎಂಬ ಸುಂದರವಾದ ಪುಷ್ಪ ಮಾಲೆ ತಯಾರಿಸಲಾಗಿದೆ. ಇದು ಚೊಚ್ಚಲ ಪ್ರಯತ್ನವಾಗಿದೆ.
4.30 ನಿಮಿಷದ ವೀಡಿಯೋ ಇದಾಗಿದೆ ಎಂದು ತಿಳಿಸಿದರು.