ಸುದ್ದಿ ಕಣಜ.ಕಾಂ| KARNATAKA | SHIMUL
ಶಿವಮೊಗ್ಗ: ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ(ಶಿಮುಲ್)ದ ಮಾರುಕಟ್ಟೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಂದಿನಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಶೇ.10 ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲು ‘ನಂದಿನಿ ಸಿಹಿ ಉತ್ಸವ’ ಆಚರಣೆಯನ್ನು ಆಗಸ್ಟ್ 19 ರಿಂದ ಹಮ್ಮಿಕೊಳ್ಳಲಾಗಿದೆ.
https://www.suddikanaja.com/2021/08/08/celebration-for-winning-gold-in-olympic/
ಶಿಮುಲ್ ಕಾರ್ಯವ್ಯಾಪ್ತಿಯ ಜಿಲ್ಲೆಗಳಲ್ಲಿ 1,188 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ನಿತ್ಯ 2 ಪಾಳಿಗಳಲ್ಲಿ ಸರಾಸರಿ ಒಟ್ಟು 6.30 ಲಕ್ಷ ಕೆ.ಜಿ. ಹಾಲನ್ನು ಸಂಗ್ರಹಿಸಲಾಗುತ್ತಿದೆ. ಈ ಹಾಲನ್ನು ಅತ್ಯಾಧುನಿಕ ಯಂತ್ರಗಳಲ್ಲಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ 1,520 ಹಾಲಿನ ಡೀಲರ್, 74 ಫ್ರಾಂಚೈಸಿ ಪಾರ್ಲರ್ ಹಾಗೂ 50 ಸ್ವಂತ ಪಾರ್ಕರ್ ಗಳ ಮೂಲಕ ಪ್ರತಿ ನಿತ್ಯ 2.30 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 32 ಸಾವಿರ ಕೆ.ಜಿ. ಮೊಸರನ್ನು ಮಾರಾಟ ಮಾಡಲಾಗುತ್ತಿದೆ.
ಇದರೊಂದಿಗೆ ವಿವಿಧ ಹಾಲಿನ ಉತ್ಪನ್ನಗಳನ್ನು ಹಾಗೂ ನಂದಿನಿ ಸಿಹಿ ತಿನಿಸುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
ಹೆಚ್ಚಿನ ಸಿಹಿ ಉತ್ಪನ್ನಗಳ ಪರಿಚಯ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಒಕ್ಕೂಟದ ಸಹಯೋಗದೊಂದಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯ ಜನತೆಗೆ ಪರಿಚಯಿಸಿ, ಮಾರಾಟವನ್ನು ಹೆಚ್ಚಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ನಂದಿನಿ ಉತ್ಸವಕ್ಕೆ ಚಾಲನೆ
ಒಕ್ಕೂಟದ ಮುಖ್ಯ ಡೇರಿಯ ಹೈಟೆಕ್ ಪಾರ್ಕರ್ ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ನಂದಿನಿ ಸಿಹಿ ಉತ್ಸವ’ದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷ ಡಿ.ಆನಂದ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕ ಎಚ್.ಬಿ. ದಿನೇಶ್, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್. ಬಸವರಾಜ್, ಒಕ್ಕೂಟದ ಎಲ್ಲ ವ್ಯವಸ್ಥಾಪಕರುಗಳು, ಎಲ್ಲ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.
https://www.suddikanaja.com/2021/05/30/good-news-by-shimul/