ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲೂಕಿನ ಮಹಿಳೆಯೊಬ್ಬರು ಆನ್ಲೈನ್ ನಲ್ಲಿ 1.85 ಲಕ್ಷ ರೂಪಾಯಿ ಮೋಸ ಹೋಗಿದ್ದಾರೆ.
ಸ್ಪೇನ್ ಮೂಲದ ವಿಲಿಯಮ್ಸ್ ಫಿಲಿಪ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಭದ್ರಾವತಿಯ ಮಹಿಳೆಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿ ಉಡುಗೋರೆ ಕಳುಹಿಸಿದ್ದಾರೆ. ಅದು ದೆಹಲಿಯ ಏರ್ ಪೋರ್ಟ್ ಗೆ ತಲುಪಿದ್ದು, ಕೋರಿಯರ್ ಚಾರ್ಜ್ ಹೆಸರಿನಲ್ಲಿ ಗೂಗಲ್ ಪೇ ಮತ್ತು ಬ್ಯಾಂಕ್ ಖಾತೆಯ ಮುಖಾಂತರ ಒಟ್ಟು 1.80 ಲಕ್ಷ ರೂಪಾಯಿ ಕಟ್ಟಿಸಿಕೊಂಡಿದ್ದಾರೆ. ಅದಾದ ಬಳಿಕ ಯಾವುದೇ ಉಡುಗೊರೆ ತಲುಪಿಲ್ಲ.
https://www.suddikanaja.com/2020/11/09/man-cheats-saying-drdo-jobs-and-took-lakhs-of-amount/
ಮೋಸ ಹೋಗಿದ್ದು ಹೇಗೆ?
ಮೂರು ತಿಂಗಳ ಹಿಂದೆ ಮಹಿಳೆಗೆ ಫೇಸ್ಬುಕ್ ನಲ್ಲಿ ಸ್ಪೇನ್ ಮೂಲದ ವಿಲಿಯಮ್ಸ್ ಫಿಲಿಪ್ ಎಂಬ ವ್ಯಕ್ತಿಯೊಬ್ಬರು ಪರಿಚಯವಾಗಿದ್ದರು. ಅವರು ಕೆಲವು ಉಡುಗೊರೆಗಳನ್ನು ಕಳುಹಿಸಿದ್ದು, ಅದು ದೆಹಲಿಗೆ ತಲುಪಿದೆ. ಅಪರಿಚ ವ್ಯಕ್ತಿಯೊಬ್ಬರು ದೆಹಲಿ ಏರ್ಪೋರ್ಟ್ ನಿಂದ ಕರೆ ಮಾಡಿ ನಂಬಿಸಿದ್ದಾರೆ. ನಂತರ, ಆ.31ರಿಂದ ಸೆ.2ರ ವರೆಗಿನ ಕೋರಿಯರ್ ಹಾಗೂ ವಿವಿಧ ಚಾರ್ಜ್ ಸೇರಿ 1.85 ಲಕ್ಷ ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅವರ ಸೂಚನೆಯಂತೆ ಮಹಿಳೆ ಕೂಡ ಅದನ್ನು ನಂಬಿ ಹಣ ಪಾವತಿಸಿದ್ದು, ನಂತರ ಮೋಸ ಹೋಗಿರುವುದು ಗೊತ್ತಾಗಿದೆ. ಆನ್ಲೈನ್ ಮೂಲಕ ಅವರು ಶಿವಮೊಗ್ಗ ಸಿ.ಎನ್.ಎ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.
https://www.suddikanaja.com/2021/04/24/fraud-agency-cheated-a-man/