ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಆನ್ಲೈನ್ ಮೂಲಕ ಕೆವೈಸಿ ಅಪ್ ಡೇಟ್ ಮಾಡುವುದಾಗಿ ನಂಬಿಸಿ ಶಿವಮೊಗ್ಗದ ವೈದ್ಯರೊಬ್ಬರಿಗೆ ಒಟ್ಟು 64,500 ರೂಪಾಯಿ ಮೋಸ ಮಾಡಿರುವ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/08/01/fraud-in-the-name-of-kbc-at-shivamogga/
ಮೋಸ ಮಾಡಿದ್ದು ಹೇಗೆ?
ಕೆವೈಸಿ ವಿವರಗಳನ್ನು ಅಪ್ ಡೇಟ್ ಮಾಡದೇ ಇರುವುದರಿಂದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವುದಾಗಿ ಸೂಚಿಸಲಾಗಿದೆ. ಅದಕ್ಕಾಗಿ, ಆನ್ಲೈನ್ ನಲ್ಲೇ ವಿವರ ಭರ್ತಿ ಮಾಡುವಂತೆ ಲಿಂಕ್ ವೊಂದನ್ನು ಕಳುಹಿಸಲಾಗಿದೆ. ಮೆಸೇಜ್ ನಲ್ಲಿ ತಿಳಿಸಿದ ಹಾಗೆ ವೈದ್ಯರು ಕ್ಲಿಕ್ ಮಾಡಿ ಮೊಬೈಲ್ ಗೆ ಬಂದ ಒಟಿಪಿಯನ್ನು ಕಳುಹಿಸಿದ್ದಾರೆ. ನಂತರ, ಸೆಪ್ಟೆಂಬರ್ 8ರಂದು ಖಾತೆಯಿಂದ 25,000 ರೂ., 20,000 ರೂ. ಹಾಗೂ 19,500 ರೂ.ರಂತೆ ಹಂತ ಹಂತವಾಗಿ ಒಟ್ಟು 64,500 ರೂಪಾಯಿ ಡ್ರಾ ಮಾಡಲಾಗಿದೆ.
ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತಗೊಂಡಿರುವ ಬಗ್ಗೆ ಮೆಸೇಜ್ ಬಂದಿದ್ದು, ಬ್ಯಾಂಕಿಗೆ ಹೋಗಿ ವಿಚಾರಿಸಲಾಗಿ ಆನ್ಲೈನ್ ನಲ್ಲಿ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಸೆ.9ರಂದು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
https://www.suddikanaja.com/2021/06/05/online-fraud/