ಸುದ್ದಿ ಕಣಜ.ಕಾಂ | KARNATAKA | HEALTH
ಶಿವಮೊಗ್ಗ: ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿನಿಂದ ಮೊದಲನೇ ಸ್ಥಾನದಲ್ಲಿ ಶಿವಮೊಗ್ಗ ಕೊನೆಯ ಕ್ಷಣದಲ್ಲಿ ಶೇ.128 ಸಾಧನೆ ಮಾಡುವ ಮೂಲಕ ದ್ವಿತೀಯ ಸ್ಥಾನ ಗಳಿಸಿದೆ.
ರಾಜ್ಯದಾದ್ಯಂತ ಶುಕ್ರವಾರ ಆಯೋಜಿಸಿದ ಬೃಹತ್ ಲಸಿಕೆ ಮೇಳದಲ್ಲಿ ಶಿವಮೊಗ್ಗ ರಾಜ್ಯದಲ್ಲೇ ದ್ವಿತೀಯ ಸ್ಥಾನ ಗಳಿಸುವ ಮೂಲಕ ಹೆಮ್ಮೆಗೆ ಪಾತ್ರವಾಗಿದೆ.
ಶಿವಮೊಗ್ಗದಲ್ಲಿ ನೀಡಲಾದ ಲಸಿಕೆಗಳೆಷ್ಟು?
ಸಂಜೆ 7.10 ಗಂಟೆಯ ವರದಿಯ ಪ್ರಕಾರ, ಶಿವಮೊಗ್ಗದಲ್ಲಿ 1,02,567 ಲಸಿಕೆಗಳನ್ನು ನೀಡಲಾಗಿದೆ. ಶಿವಮೊಗ್ಗಕ್ಕೆ 80,000 ಲಸಿಕೆಗಳ ಗುರಿಯನ್ನು ನೀಡಲಾಗಿತ್ತು. ಮೊದಲನೇ ಸ್ಥಾನದಲ್ಲಿರುವ ಬೆಂಗಳೂರು ನಗರ 65,957 ಲಸಿಕೆ ನೀಡಿ ಶೇ.132 ಸಾಧನೆ ಮಾಡಿದೆ. ಇದಕ್ಕೆ 50,000 ಗುರಿ ನೀಡಲಾಗಿತ್ತು.