ಸುದ್ದಿ ಕಣಜ.ಕಾಂ | TALUK | ACCIDENT
ಭದ್ರಾವತಿ: ತಾಲೂಕಿನ ಗೋಣಿಬೀಡು ಬಳಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೊಬ್ಬರ ತಲೆಗೆ ಗಂಭೀರ ಗಾಯವಾದ ಘಟನೆ ಮಂಗಳವಾರ ಸಂಭವಿಸಿದೆ.
READ | ಇಂದಿನಿಂದ ಶಿವಪ್ಪನಾಯಕ ಅರಮನೆ ಮ್ಯೂಸಿಯಂ ಪ್ರವೇಶ ನಿಷೇಧ, ಕಾರಣವೇನು ಗೊತ್ತಾ?
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಘಟ್ಟ ಬಳಿಯ ಕುವೆಂಪು ನಗರ ನಿವಾಸಿ ಮಧು (28) ಎಂಬುವವರು ಗಾಯಗೊಂಡಿದ್ದಾರೆ.
ಮಧು ಅವರು ಕುವೆಂಪು ನಗರದಿಂದ ಭದ್ರಾವತಿಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿದೆ. ತಕ್ಷಣ ಸ್ಥಳದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದುವರೆಗೆ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.