ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ಎಂಟು ತಿಂಗಳ ಬಳಿಕ ಬೈಕ್ ಕಳ್ಳರ ಗ್ಯಾಂಗ್ ವೊಂದು ಸೆರೆಯಾಗಿದೆ. ಬೈಕ್ ಕಳ್ಳತನವೊಂದರ ತನಿಖೆ ವೇಳೆ ಇನ್ನಷ್ಟು ಪ್ರಕರಣಗಳು ಪತ್ತೆಯಾಗಿವೆ.
ಡಿಸೆಂಬರ್ 7ರಂದು ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ಮುಂಭಾಗದ್ದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಲಾಗಿತ್ತು.
ಬೈಕ್ ಕಳೆದುಕೊಂಡಿದ್ದ ಶಿಕಾರಿಪುರ ತಾಲೂಕಿನ ವಾದಿಗೆರೆ ತಾಂಡಾ ನಿವಾಸಿಯೊಬ್ಬರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಪಿ.ಎಸ್.ಐ ಹಾಗೂ ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
READ | ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ‘ನೇರಳೆ ಏಡಿ’, ಕಾರವಾರದಲ್ಲೂ ಪತ್ತೆ, ತಜ್ಞರೇನು ಹೇಳುತ್ತಾರೆ?
ಆರೋಪಿಗಳ ಮೇಲೆ ಯಾವ ಠಾಣೆಯಲ್ಲಿ ಎಷ್ಟು ಕೇಸ್?
ಶಿಕಾರಿಪುರ ಟೌನ್ ಠಾಣೆಯ 1, ಆನವಟ್ಟಿ ಠಾಣೆಯ 1, ಸೊರಬ ಠಾಣೆಯ 1,ಶಿಕಾರಿಪುರ ಗ್ರಾಮಾಂತರ ಠಾಣೆಯ 1, ತುಂಗಾ ನಗರ ಠಾಣೆಯ 4, ವಿನೋಬನಗರ ಠಾಣೆ 1 ಹಾಗೂ ಹಾಸನ ಜಿಲ್ಲೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ 1 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ₹ 2,50,000 ಮೌಲ್ಯದ 10 ವಿವಿಧ ಕಂಪೆನಿಯ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
https://www.suddikanaja.com/2021/08/29/bike-thieves-gang-arrested-in-shivamogga/