ದೀಪದಡಿ ಮಲಗಬೇಕಾದರೆ ಹುಷಾರ್, ಮಹಿಳೆಯ ಸಾವಿಗೆ ಕಾರಣವಾದ ದೀಪ

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ವಿದ್ಯುತ್ ಕಡಿತಗೊಂಡ ಪರಿಣಾಮ ದೀಪ ಹಚ್ಚಿಕೊಂಡು ಮಲಗಿದ್ದಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಾಕಿ ಮಹಿಳೆ ಮೃತಪಟ್ಟಿದ್ದಾಳೆ.
ವೆಂಕಟೇಶ್ ನಗರದ ಲಕ್ಷ್ಮಮ್ಮ(65) ಎಂಬಾಕೆ ಮೃತಪಟ್ಟಿದ್ದಾಳೆ. ಮನೆಯಲ್ಲಿ ಮಹಿಳೆಯೊಬ್ಬಳೇ ಮಲಗಿದ್ದು ಆಗ ಸೀರೆಗೆ ಬೆಂಕಿ ತಗುಲಿದೆ. ನಂತರ ಆಕೆ ಕಿರುಚಿಕೊಂಡಿದ್ದಾಳೆ. ಮೈಕೈಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿದ್ದ ಮಹಿಳೆಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಜಯನಗರ ಪೆÇಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದೆ.

error: Content is protected !!