ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ತುಂಗಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 45 ರಿಂದ 55 ವರ್ಷದ ಅಪರಿಚಿತ ಪುರುಷನ ಮೃತದೇಹವು ತುಂಗಾ ನದಿ ರೈಲ್ವೆ ಬ್ರಿಡ್ಜ್ ಕೆಳಗೆ ನೀರಿನಲ್ಲಿ ತೇಲಾಡುತ್ತಿದ್ದ ಸ್ಥಿತಿಯಲ್ಲಿ ದೊರೆತಿದೆ.
READ | ತುಂಗಾ ನದಿಯಲ್ಲಿ ಈಜಲು ಹೋದವ ಶವವಾಗಿ ಪತ್ತೆ
ಮೃತನ ದೇಹವು ಬಾತುಕೊಂಡಿದ್ದು, ಬಲಗೈಯ ಹಸ್ತದ ಹಿಂಭಾಗದಲ್ಲಿ ಓಂ ಗುರುತು, ತ್ರಿಶೂಲ ಮತ್ತು ಗಣಪತಿಯ ಹಚ್ಚೆಯ ಗುರುತು ಇರುತ್ತದೆ. ಮೃತನು ಜೀನ್ಸ್ ಪ್ಯಾಂಟ್, ಕಾಫಿ, ಕೇಸರಿ ಗೆರೆಗಳಿರುವ ಕೇಸರಿ ಬಣ್ಣದ ಟೀಶರ್ಟ್ ಧರಿಸಿರುತ್ತಾನೆ. ಮೃತನ ಬಾಯಿಂದ ಹಲ್ಲಿನ ಸೆಟ್ ಹೊರ ಬಂದಿರುತ್ತದೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.