ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ತಾಳಗುಪ್ಪದಲ್ಲಿ ಭಾನುವಾರ ರಾತ್ರಿ ಬೆಂಕಿ ಅವಘಡವೊಂದು ಸಂಭವಿಸಿದ್ದು, ಘಟನಾ ಸ್ಥಳದ ಆಸುಪಾಸು ವಾಸವಾಗಿರುವವರು ಗಾಬರಿಯಾಗಿದ್ದಾರೆ.
ವಿದ್ಯುತ್ ಲೈನ್ ವೊಂದಕ್ಕೆ ಬೆಂಕಿ ತಾಕಿದ್ದು ಅಗ್ನಿ ಅವಘಡ ಸಂಭವಿಸಿದೆ. ತಾಳಗುಪ್ಪದ ರಂಗಪ್ಪ ಗುಡ್ಡದಲ್ಲಿ ಘಟನೆ ನಡೆದಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಫೋಟೊ, ವಿಡಿಯೋ ವೈರಲ್
ಘಟನೆ ನಡೆದ ಕೆಲವೇ ಹೊತ್ತಲ್ಲಿ ಬೆಂಕಿ ಕನ್ನಾಲಿಗೆ ಆದ ವಿಡಿಯೋ ವೈರಲ್ ಆಗಿವೆ. ಇದು ಎಂ.ಆರ್.ಎಸ್. ಬಳಿ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ತದನಂತರ, ತಾಳಗುಪ್ಪ ಬಳಿ ನಡೆದಿರುವುದು ಗೊತ್ತಾಗಿದೆ.
ಘಟನೆ ನಡೆದಿದ್ದು ಹೇಗೆ?
ಉತ್ಪಾದನೆ ಮಾಡಿದ ವಿದ್ಯುತ್ ಅನ್ನು ಸರಬರಾಜು ಮಾಡುವುದಕ್ಕೆ ಹಾಕಲಾಗಿರುವ ಹೈ ಟೆನ್ಶನ್ ತಂತಿಗೆ ಮರವೊಂದು ತಾಕಿದೆ. ಪರಿಣಾಮ ಬೆಂಕಿ ಧಗಧಗನೆ ಉರಿದಿದೆ. ಇದಾದ ಬಳಿಕ ಭಾರೀ ಸ್ಫೋಟದ ಸದ್ದು ಕೇಳಿಸಿದೆ ಎನ್ನುತ್ತಾರೆ ಸ್ಥಳೀಯರು. ಅಗ್ನಿ ಅವಘಡದಿಂದಾದ ನಷ್ಟ, ಏನೇನಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.