ಸುದ್ದಿ ಕಣಜ.ಕಾಂ | CITY | CORPORATION
ಶಿವಮೊಗ್ಗ: ಸಾರ್ವಜನಿಕರ ಅನುಕೂಲಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ದೂರವಾಣಿ ಸಂಖ್ಯೆ ನೀಡಿದೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಕರೆ ಮಾಡಬಹುದು.
ಯಾವ ಯಾವ ದೂರುಗಳನ್ನು ಸಲ್ಲಿಸಬಹುದು?
ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಉತ್ತಮ ಮತ್ತು ತುರ್ತು ಸೇವೆ ಕಲ್ಪಿಸುವ ದೃಷ್ಟಿಯಿಂದ ಮೂಲ ಸೌಕರ್ಯಗಳಾದ ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯ ನೀರು ಸರಬರಾಜು, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ, ಕಂದಾಯ ನಿಗದಿ ಇತ್ಯಾದಿ ಸೇವೆಗಳಲ್ಲಿ ವಿಳಂಬ ಮತ್ತು ವ್ಯತ್ಯಯವಾದಾಗ ಈ ವಿಭಾಗದ ಮುಖ್ಯಸ್ಥರನ್ನು ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸಬಹುದು. ಇದಕ್ಕಾಗಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಸಹಾಯವಾಣಿ ಸಂಖ್ಯೆ 18004257677 ನ್ನು ಪ್ರಕಟಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ದೂರುಗಳ ತ್ವರಿತ ನಿವಾರಣೆ ಮಾಡುಕೊಳ್ಳುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ
ಪಾಲಿಕೆ ಆಡಳಿತ ಹಾಗೂ ಆಶ್ರಯ ವಿಭಾಗಕ್ಕೆ ಸಂಬಂಧಿಸಿದ ದೂರು ನೀಡಲು ಉಪ ಆಯುಕ್ತರು ಎಚ್.ಪಿ. ಪ್ರಮೋದ್ 9538534685,6361468740 ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು, ಕಟ್ಟಡ ಪರವಾನಗಿ ಹಾಗೂ ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದಂತೆ ದೂರು ನೀಡಲು ಪಿ.ಆರ್.ಒ ತುಷಾರ್ ಬಿ. ಹೊಸೂರ್, ಡೊಂಕಪ್ಪ ಇಇ, ಹರೀಶ್ ಇಇ -9449651855, 9448146358, ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದ ದೂರು ನೀಡಲು ವಿದ್ಯುತ್ ಇಇ ಶ್ರೀಧರ್- 8762288680,ನೀರು ಸರಬರಾಜು ಸಂಬಂಧಿಸಿದ ದೂರು ನೀಡಲು ರಮೇಶ್-ಇಇ (ಕೆಯುಡಬ್ಲ್ಯೂಎಸ್ ಮತ್ತು ಡಿಬಿ)- 9480689673,9480813132 ನಗರ ಸ್ವಚ್ಛತೆಗೆ ಸಂಬಂಧಿಸಿದ ದೂರು ನೀಡಲು ಪಾಲಿಕೆ ಆರೋಗ್ಯಾಧಿಕಾರಿ ಡಾ. ಎಚ್.ಬಿ.ಮದಕರಿ ನಾಯಕ 7676135028, ವ್ಯಾಪಾರ ಪರವಾನಗಿ ಹಾಗೂ ಜನನ- ಮರಣ ಪ್ರಮಾಣ ಪತ್ರದ ಕುರಿತು ವಿಚಾರಿಸಲು ಅಮೋಘ್ ಎಸ್.ಕವಲಗಿ -9449324245,ಬೀಡಾಡಿ ಜಾನುವಾರುಗಳು ಹಾಗೂ ಬೀದಿ ನಾಯಿಗಳ ಉಪದ್ರವ ಕುರಿತು ದೂರ ನೀಡಲು ಪಶುವೈದ್ಯಾಧಿಕಾರಿ ಡಾ. ಎಸ್.ಟಿ.ರೇಖಾ, 9886326268,ಕಂದಾಯ ಶಾಖೆಗೆ ಸಂಬಂಧಿಸಿದಂತೆ ದೂರು ನೀಡಲು ಉಪ ಆಯುಕ್ತರು (ಕಂ) ಡಿ.ನಾಗೇಂದ್ರ ಕಂದಾಯಾಧಿಕಾರಿ ಬಾಲಾಜಿ ಮತ್ತು ಸುನೀತಾ 9880396995, 8762019195,9482056858, 7892009461 ಗಳನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು.
https://www.suddikanaja.com/2020/12/20/shivamogga-city-corporation-tax-increase/