ತ್ಯಾವರೆಕೊಪ್ಪದ ಶಿವಮೊಗ್ಗ ಮೃಗಾಲಯ ಅಂದ ಹೆಚ್ಚಿಸಲು ಬಂದ ಮತ್ತೊಂದು ಗೆಸ್ಟ್

ಸುದ್ದಿ ಕಣಜ.ಕಾಂ | DISTRICT | TOURISM 
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯದ ಅಂದ ಹೆಚ್ಚಿಸುವುದಕ್ಕೆ ಮತ್ತೊಂದು ಗೆಸ್ಟ್ ಬಂದಿದೆ.
‘ಪೂರ್ಣಿಮಾ’ ಹೆಸರಿನ ಹೆಣ್ಣು ಹುಲಿಯನ್ನು ಮೈಸೂರಿನಿಂದ ಶಿವಮೊಗ್ಗಕ್ಕೆ ಪಂಜರದಲ್ಲಿ ತರಲಾಗಿದ್ದು, ಹುಲಿಗಳ ಸಂಖ್ಯೆಯು ಆರಕ್ಕೆ ಹೆಚ್ಚಿದೆ.

READ | ಹಸುಗಳಲ್ಲಿಯೇ ಅತೀ ಹೆಚ್ಚು ವರ್ಷ ಬದುಕಿದ ಮಲೆನಾಡು ಗಿಡ್ಡ ತಳಿಯ ಕೌಲೆ ಇನ್ನಿಲ್ಲ!

ಪೊನ್ನಂಪೇಟೆಯಲ್ಲಿ ಸೆರೆ ಸಿಕ್ಕಿದ್ದ ವೈಲ್ಡ್ ಟೈಗರ್
ಪೊನ್ನಂಪೇಟೆಯಲ್ಲಿ 11 ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿದ್ದು, ಮೈಸೂರಿನ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತಿತ್ತು. ಕಳೆದ ಎರಡು ವರ್ಷಗಳಿಂದ ಅಲ್ಲಿಯೇ ಇದ್ದ ಹುಲಿಯನ್ನು ಕೋರಿಕೆಯ ಮೇರೆಗೆ ಶಿವಮೊಗ್ಗಕ್ಕೆ ನೀಡಲಾಗಿದೆ.
ಸಫಾರಿಯಲ್ಲಿ ಈಗಿರುವ ಹುಲಿಗಳಾವವು?
ಶಿವಮೊಗ್ಗ ಮೃಗಾಲಯದ ಸಫಾರಿಯಲ್ಲಿ ರಾಮ, ಸೀತಾ, ವಿಜಯ, ದಶಮಿ, ಹನುಮ ಹೆಸರಿನ ಹುಲಿಗಳು ಇವೆ. ಈ ಕುಟುಂಬಕ್ಕೆ ಪೂರ್ಣಿಮಾ ಸೇರ್ಪಡೆಯಾಗಿದ್ದಾಳೆ. ಕಾಡಿನಲ್ಲಿ ಸಿಕ್ಕಿರುವ ಹುಲಿಯಾಗಿರುವುದರಿಂದ ಸಹಜವಾಗಿಯೇ ಈಗಲೂ ಸಿಟ್ಟು ಮತ್ತು ಆಕ್ರೋಶ ಕಡಿಮೆಯಾಗಿಲ್ಲ. ಉಳಿದ ಹುಲಿಗೆ ಹೋಲಿಸಿದರೆ ಇದು ಪೂರ್ಣಿಮಾ ವೈಲ್ಡ್ ಆಗಿಯೇ ಇದ್ದಾಳೆ.

https://www.suddikanaja.com/2021/11/07/shivamogga-zoo-bring-hippopotamus-from-mysuru/