ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಒಕ್ಕೋಡಿ ಸಮೀಪ ಬುಧವಾರ ರಾತ್ರಿ ಕ್ರೂಸರ್ ವೊಂದು ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ಕುಷ್ಟಗಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
READ | ತ್ಯಾವರೆಕೊಪ್ಪದ ಶಿವಮೊಗ್ಗ ಮೃಗಾಲಯ ಅಂದ ಹೆಚ್ಚಿಸಲು ಬಂದ ಮತ್ತೊಂದು ಗೆಸ್ಟ್
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಗೌರಮ್ಮ(55) ಎಂಬುವವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬ್ಯಾಕೋಡು ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.