ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ನಲ್ಲಿ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮತ್ತು ವಿದ್ಯಾರ್ಹತೆ
ದಿನಾಂಕ 30-03-2022ರಂದು ಕನಿಷ್ಠ 16 ವರ್ಷ ತುಂಬಿರಬೇಕು. ಮತ್ತು 26 ವರ್ಷ ಮೀರಿರಬಾರದು. ಎಸ್ಸೆಸ್ಸೆಲ್ಸಿ ಅಥವಾ ಐಟಿಐ (ಮೆಕ್ಯಾನಿಕ್ ಡೀಸಲ್ ಹಾಗೂ ಫಿಟ್ಟರ್ ವೃತ್ತಿ)ಯಲ್ಲಿ ಉತ್ತೀರ್ಣರಾಗಿರಬೇಕು.
READ | ಇಂಡಿಯನ್ ಬ್ಯಾಂಕ್ ನಲ್ಲಿ 202 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ
ತರಬೇತಿ ಭತ್ಯೆ
ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 6,000 ರೂಪಾಯಿ ಹಾಗೂ ಐಟಿಐ ತೇರ್ಗಡೆಯಾದವರಿಗೆ 7,000 ರೂಪಾಯಿ ತರಬೇತಿ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಹೇಗೆ, ಇವುಗಳನ್ನು ಗಮನಿಸಿ
- ಅಭ್ಯರ್ಥಿಗಳು ವೆಬ್ ಪೋರ್ಟಲ್ www.apprenticeshipindia.gov.in ನಲ್ಲಿ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ನಿರ್ದೇಶನಾಲಯ, ನವದೆಹಲಿ ಅವರು ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಂತರ್ಜಾಲ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಹೀಗಾಗಿ, ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.
- ನೋಂದಾಯಿಸಿದ ಬಳಿಕ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದಿಗೆ ಇತ್ತೀಚಿನ 2 ಭಾವಚಿತ್ರ, ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳಾದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ, ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿಯೊಂದಿಗೆ ಮಾರ್ಚ್ 30ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಬಿಎಂಟಿಸಿ, ತರಬೇತಿ ಕೇಂದ್ರ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು ಇಲ್ಲಿ ಖುದ್ದಾಗಿ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರಬೇಕು. ಅಪೂರ್ಣ ಅಥವಾ ವಿಳಂಬವಾಘಿ ಸಲ್ಲಿಸಿರುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
- ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪೋರ್ಟಲ್ ಮೂಲಕ ನೇರವಾಗಿ ಅವರ ಇಮೇಲ್ ಗೆ ಕಳುಹಿಸಲಾಗುವುದು. ಹೀಗಾಗಿ, ಅವರ ಸ್ವಂತದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು.
- ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿ ತರಬೇತಿ ಪಡೆಯುವ ಸಂಸ್ಥೆ ಮತ್ತು ಬಿಟಿಪಿ (Establishment
and Basic Training Provider- BTP) ಆಯ್ಕೆ ಮಾಡುವಾಗ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಆಯ್ಕೆ ಮಾಡಿಕೊಳ್ಳಬೇಕು.
ವೃತ್ತಿಯ ಹೆಸರು | ತರಬೇತಿ ಅವಧಿ | ಒಟ್ಟು ಹುದ್ದೆ | |
ಎಸ್ಸೆಸ್ಸೆಲ್ಸಿ ಪಾಸ್ | ಐಟಿಐ ಪಾಸ್ | ||
ಮೆಕ್ಯಾನಿಕಲ್ ಡೀಸೆಲ್ | 2 ವರ್ಷ | 1 ವರ್ಷ | 250 |
ಫಿಟ್ಟರ್ | 2 ವರ್ಷ | 1 ವರ್ಷ | 50 |
ಒಟ್ಟು ಹುದ್ದೆಗಳು | 300 |
https://www.suddikanaja.com/2021/07/08/madhukranti-web-portal/