ಈಜಲು ಹೋದವರು ಶವವಾಗಿ ಪತ್ತೆ

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ತಾಲೂಕಿನ ನೊಣಬೂರು ಸಮೀಪದ ಬಂದ್ಯಾ ಗ್ರಾಮದ ವರ್ಧನ್(19) ಹಾಗೂ ಹೊಸನಗರದ ಸೊನಾಲೆ ಗ್ರಾಮದ ಮಂಜುನಾಥ್ (21) ಎಂಬುವವರು ಮೃತಪಟ್ಟಿದ್ದಾರೆ.

READ | ಕೋಟೆ ಮಾರಿಕಾಂಬ ಜಾತ್ರೆ, ಅಮ್ಮನ ಮಡಿಲಿನಲ್ಲಿ ‘ಅಪ್ಪು’ ಭಾವಚಿತ್ರ, ವೈರಲ್ ಆಯ್ತು ವಿಡಿಯೋ

ಅಗ್ನಿಶಾಮಕ ದಳದ ನಿರಂತರ ಕಾರ್ಯಾಚರಣೆ
ರಾಮಕೊಂಡದ ಬಳಿ ಬಿಎ ಓದುತ್ತಿರುವ ವರ್ಧನ್ ಹಾಗೂ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಅವರು ರಾಮಕೊಂಡದ ಬಳಿ ನಾಪತ್ತೆಯಾಗುದ್ದರು. ತಕ್ಷಣ ನದಿಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಮುಳುಗು ತಜ್ಞ ಕುರುವಳ್ಳಿ ಪ್ರಮೋದ್ ಅವರು ಕಾರ್ಯಾಚರಣೆ ಮಾಡಿದರು. ಸತತ ಹುಡುಕಾಟದ ನಂತರ ಶವಗಳು ಸಿಕ್ಕಿವೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ನೀರು ಪಾಲು