ಸುದ್ದಿ ಕಣಜ.ಕಾಂ | TALUK | POWER CUT
ಶಿವಮೊಗ್ಗ: ಎಂ.ಆರ್.ಎಸ್. 220 ಕೆವಿ ಮುಖ್ಯ ಸ್ವೀಕರಣಾ ಕೇಂದ್ರದ 66 ಕೆವಿ ಬಸ್ನ ಕ್ಲಾಂಪ್ ತೀವ್ರ ಉಷ್ಣತೆ ಹೊಂದಿರುವುದರಿಂದ ಅತಿ ತುರ್ತಾಗಿ ಅದನ್ನು ಬದಲಿಸಬೇಕಾಗಿರುವುದರಿಂದ ಮಾರ್ಚ್ 9ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಂಕರಮಠ ರಸ್ತೆಯಲ್ಲಿ ವ್ಯಕ್ತಿಗೆ ಚಾಕು ಇರಿತ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹೊಳಲೂರು ವಿವಿ ಕೇಂದ್ರ, ತಾವರೆಚಟ್ನಹಳ್ಳಿ ವಿವಿ ಕೇಂದ್ರ ಮತ್ತು ಹೊಳೆಹೊನ್ನೂರು ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಎಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೊಂದಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್ಗಳು, ಕೂಡ್ಲಿ, ಚಿಕ್ಕೋಡಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಮಹಿಳೆಯರಿಗೆ ಭಿನ್ನವಾಗಿ ಗೌರವ ಸೂಚಿಸಿದ ಗೂಗಲ್, ವೈರಲ್ ಆಯ್ತು ಎನಿಮೇಷನ್, ಏನಿದರ ವಿಶೇಷ?
10ರಂದು ಪವರ್ ಕಟ್
ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-4 ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಸ್.ಎಲ್.ವಿ ಹೋಟೆಲ್, ಯೂನಿಟಿ ಆಸ್ಪತ್ರೆ, ಆದಿಚುಂಚನಗಿರಿ ಸಮುದಾಯ ಭವನ, ನಂದಿ ಪೆಟ್ರೋಲ್ ಬಂಕ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.