ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ನಗರದ 9 ವರ್ಷದ ಬಾಲಕಿಯೊಬ್ಬಳು ಬೆಂಕಿಪೊಟ್ಟಣ ಕೇಳಿಕೊಂಡು ಬಂದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ 5 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹30,000 ದಂಡ ವಿಧಿಸಲಾಗಿದೆ.
ಮಂಜಪ್ಪ (49) ಎಂಬಾತ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಬಾಲಕಿಯು ಬೆಂಕಿಪಟ್ಟಣ ಕೇಳಿಕೊಂಡು ತನ್ನ ಪಕ್ಕದ ಮನೆಯ ಮಂಜಪ್ಪ ಅವರ ಮನೆಗೆ ಹೋದಾಗ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ನೊಂದ ಬಾಲಕಿ ನೀಡಿದ ಹೇಳಿಕೆ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಕಲಂ 354 (A) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ, ಹೇಳಿದ್ದೇನು?
ಮಹಿಳಾ ಪೊಲೀಸ್ ಠಾಣೆ ಪಿ.ಎಸ್.ಐ ಶಾಂತಲಾ ಅವರು ತನಿಖೆ ಕೈಗೊಂಡು 2021ರ ಜನವರಿ 27ರಂದು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ನ್ಯಾಯಧೀಶ ವಿ.ಎಚ್.ದಯಾನಂದ್ ಅವರು ಆರೋಪಗಳು ಸಾಬೀತು ಆಗಿರುವುದರಿಂದ ಮಂಜಪ್ಪನಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.