ಸುದ್ದಿ ಕಣಜ.ಕಾಂ | DISTRICT | PUBLIC NOTICE
ಶಿವಮೊಗ್ಗ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (animal husbandry department)ಯ ಕರ್ನಾಟಕ ಕುಕ್ಕುಟ, ಜಾನುವಾರು ಆಹಾರ (ತಯಾರಿಕ ಮತ್ತು ನಿಯಂತ್ರಣ) ಕಾಯ್ದೆ ಅನ್ವಯ ಕೋಳಿ ಮತ್ತು ಜಾನುವಾರು, ಆಹಾರ ತಯಾರಿಕ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಸಂಸ್ಥೆಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆಯು ಈಗಾಗಲೇ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದಿದ್ದರೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ತಿಳಿಸಿದೆ.
ಪರವಾನಗಿ ಪಡೆಯುವುದು ಹೇಗೆ?
ಪರವಾನಗಿಯು ಪ್ರತಿ ವರ್ಷ ಡಿಸೆಂಬರ್ 31ಕ್ಕೆ ಮುಕ್ತಾಯವಾಗುವುದರಿಂದ ನವೀಕರಣವನ್ನು ಜನವರಿ 1 ರಿಂದ ಪಡೆಯಬೇಕಿದ್ದು, ಪ್ರಸ್ತುತ 2022ನೇ ಸಾಲಿಗೆ ಕೋಳಿ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ಹೊಸದಾಗಿ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧು ಜಾಲತಾಣವನ್ನು ಪ್ರಾರಂಭಿಸಲಾಗಿದೆ. sevasindundhuservice.karnataka.gov.in ಅಥವಾ ಗ್ರಾಮ ಒನ್ (Grama one) ಮೂಲಕ ಆನ್ ಲೈನ್ ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ ಪರವಾನಗಿ ಪಡೆಯುವಂತೆ ಜಿಲ್ಲಾ ಪಶು ಆಸ್ಪತ್ರೆಯ ಪರವಾನಗಿ ಪ್ರಾಧಿಕಾರ ಮತ್ತು ಉಪನಿರ್ದೇಶಕರು ತಿಳಿಸಿದ್ದಾರೆ.
ಪರವಾನಗಿ ಪಡೆಯದಿದ್ದರೆ ನಿಯಮಾನುಸಾರ ಕ್ರಮವಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಪಾಲನಾ ಇಲಾಖೆಯ ಸಂಸ್ಥೆಗಳನ್ನು ಅಥವಾ ದೂ.ಸಂ.: 08182-251559 ಗಳನ್ನು ಸಂಪರ್ಕಿಸುವುದು.