ಏಪ್ರಿಲ್ 28ರಂದು ಕರೆಂಟ್ ಇರಲ್ಲ

 

 

ಸುದ್ದಿ‌ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆ ಅಡಿ 11 ಕೆ.ವಿ. ಯು.ಜಿ. ಕೇಬಲ್ ಚಾರ್ಜಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 28 ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ದುರ್ಗಿಗುಡಿ, ಪಾರ್ಕ್‌ ಬಡಾವಣೆ, ಗೋಪಿ ಸರ್ಕಲ್, ತಿಲಕ್‍ ನಗರ, ರಾಘವೇಂದ್ರ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!