ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಮತ್ತು ಐ.ಪಿ.ಡಿ.ಎಸ್. ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಜೂನ್ 16 ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೇಕ್ಸ್, ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ಕೆ.ಎಚ್.ಬಿ. ಎ ರಿಂದ ಜಿ ಬಡಾವಣೆ, ಪೊಲೀಸ್ ಚೌಕಿ, ವಿನೋಬನಗರ ಪೊಲೀಸ್ ಠಾಣೆ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಪ್ರಿಯದರ್ಶಿನಿ ಲೇಔಟ್, ತಿಮ್ಮಕ್ಕ ಲೇಔಟ್, ವಿನೋಬನಗರ 100 ಅಡಿ ರಸ್ತೆ, ಎ.ಪಿ.ಎಂ.ಸಿ.ಮಾರ್ಕೆಟ್, ಕಾಶೀಪುರ, ಇಂದಿರಾಗಾಂಧಿ ಬಡಾವಣೆ, ಆಲ್ಕೋಳ ಅರಣ್ಯ ಕಚೇರಿ, ಬಾಲಮಂದಿರ ಮಹಿಳಾ ಇಲಾಖೆ, ಆಹಾರ ನಿಗಮ, ವಿನೋಬನಗರ 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.