ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(MESCOM)ಯು ಎಂಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ 11 ಕೆ.ವಿ. ಯು.ಜಿ.ಕೇಬಲ್ ಚಾರ್ಚಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಜೂನ್ 12 ಮತ್ತು 13 ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಜೂ.12ರಂದು ಬ್ಲಡ್ ಬ್ಯಾಂಕ್ ರಸ್ತೆ, ರೈಲ್ವೆ ಸ್ಟೇಷನ್, ಬಸವನಗುಡಿ, ವಿನಾಯಕನಗರ, ಹನುಮಂತನಗರ, ಬಾಲರಾಜ್ ಅರಸ್ ರಸ್ತೆ, ಕೋರ್ಟ್ರಸ್ತೆ, ಡಿ.ಸಿ.ಸಿ.ಬ್ಯಾಂಕ್ ರಸ್ತೆ, ವಿನಾಯಕ ಪಾರ್ಕ್, ಮಂದಾರ ಶಾಲೆ ಹತ್ತಿರ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಮೆಹಂದಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶ.
ಜೂ.13ರಂದು ಸೋಮಯ್ಯ ಲೇಔಟ್, ಜೋಸೆಫ್ನಗರ, ಡಿ.ಬಿ.ಎನ್.ಲೇಔಟ್, ಮೀನಾಕ್ಷಿ ಭವನ್ ರಸ್ತೆ, ಬಾಪೂಜಿನಗರ ರಸ್ತೆ, ಟ್ಯಾಂಕ್ ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://suddikanaja.com/2021/08/09/accused-arrested-for-murder-case/