BS Yediyurappa | ಪಿ.ಎಫ್.ಐ ಸಿದ್ಧರಾಮಯ್ಯನವರ ಪಾಪದ ಕೂಸು, ಕಟುವಾಗಿ ಟೀಕಿಸಿದ ಯಡಿಯೂರಪ್ಪ

BS Yediyurappa

 

 

HIGHLIGHTS

  • ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಕ್ ಪ್ರಹಾರ
  • ಶೀಘ್ರವೇ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗುವುದು, ವಿಧಾನಸಭೆ ಚುನಾವಣೆಯಲ್ಲಿ 150 ಸೀಟ್ ಗೆಲ್ಲುವ ಪಣ

ಸುದ್ದಿ ಕಣಜ.ಕಾಂ | KARNATAKA | 29 SEP 2022
ಶಿವಮೊಗ್ಗ (shivamogga): ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಸಿದ್ದರಾಮಯ್ಯ (siddaramaiah) ವಿರುದ್ಧ ವಾಗ್ದಾಳಿ ನಡೆಸಿದರು.

READ | ಚಾರ್ಲಿ 777 ನಡುವೆಯೇ ‘ಚಾಲಿ 999’ ಹವಾ! ಏನಿದು ಇಲ್ಲಿದೆ ಮಾಹಿತಿ

ಬಿ.ಎಸ್.ವೈ ಆರೋಪಗಳೇನು?

  • ಪಿಎಫ್‌ಐ(PFI) ಸಿದ್ದರಾಮಯ್ಯ ಅವರ ಪಾಪದ ಕೂಸು. ಅವರ ಅಪರಾಧದಿಂದ ಇಷ್ಟೆಲ್ಲ ಅನಾಹುತಗಳಾಗಿವೆ.
  • ಇಡೀ ದೇಶದ ಜನ ಬಿಜೆಪಿಯ ಜೊತೆಗಿದ್ದಾರೆ. ಅದನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ತೋಚದೇ‌ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
  • ಇಷ್ಟೆಲ್ಲ ನಡೆಯುತ್ತಿರುವಾಗ‌ ಸಿದ್ದರಾಮಯ್ಯ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯ ಅವರು ಜಾಗೃತರಾಗಬೇಕು.

150 ಸ್ಥಾನಗಳಲ್ಲಿ‌ ಗೆಲ್ಲುವ ಪಣ
ಪ್ರಧಾ‌ನಿ ‌ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ(Assembly election)ಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಮಾಡಲಾಗಿದೆ. ಇನ್ನೂ ನಾಲ್ಕು ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಲಾಗುವುದು.
ತಲ್ಲೂರು ಸೇರ್ಪಡೆಯಿಂದ ಇನ್ನಷ್ಟು ಬಲ
ಸೊರಬ (sorab) ಕಾಂಗ್ರೆಸ್ (Congress) ಮುಖಂಡ ರಾಜು ತಲ್ಲೂರು  ಬಿಜೆಪಿಗೆ ಸೇರ್ಪಡೆಯಾಗಿದ್ದು, ಇನ್ನಷ್ಟು ಬಲ ಬಂದಿದೆ. ಟಿಕೆಟ್ ವಿಚಾರದ ಪ್ರಸ್ತಾಪಿಸಿದ ಬಿ.ಎಸ್.ವೈ, ‘ಯಾವುದೇ ಷರತ್ತುಗಳನ್ನು ಹಾಕದೇ ತಲ್ಲೂರು ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

https://suddikanaja.com/2022/04/19/bs-yediyurappa-visited-shivamogga-airport/

Leave a Reply

Your email address will not be published. Required fields are marked *

error: Content is protected !!