City center mall | ಮಾಲ್ ಲೀಸ್ ಅವಧಿ ಕೇಸಿನ ತನಿಖಾ ವರದಿ ಬಹಿರಂಗ‌ ಪಡಿಸಲು ಒತ್ತಾಯ

Shivappa nayak mall

 

 

ಸುದ್ದಿ‌ ಕಣಜ.ಕಾಂ | CITY | 01 SEPT 2022
ಶಿವಮೊಗ್ಗ: ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್‘ನ (shivappa nayak city center mall) ಲೀಸ್ (lease) ಅವಧಿಯ ಬಗ್ಗೆ ಕೈಗೊಂಡಿರುವ ತನಿಖಾ‌ ವರದಿ (investigation report) ಬಹಿರಂಗ‌ ಪಡಿಸಬೇಕೆಂದು ಪಾಲಿಕೆಯ‌ ವಿಪಕ್ಷ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಲಾಯಿತು.

READ | ಶಿವಮೊಗ್ಗದಲ್ಲಿ 4 ದಿನ ಯೆಲ್ಲೋ ಅಲರ್ಟ್, ಧಾರಾಕಾರ ಮಳೆಯ ಮುನ್ಸೂಚನೆ

ಮಾಲ್ ನ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ವಿಸ್ತರಿಸುವ ಸಂಬಂಧ ಪಾಲಿಕೆಯ ಸಾಮಾನ್ಯ‌ ಸಭೆಗೆ ಚರ್ಚೆಗೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲದಕ್ಕೆ‌ ಕಾರಣೀಭೂತರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಲಾಯಿತು. ಆಗ ಪಾಲಿಕೆಯ ಮೇಯರ್ ಅವರು 5 ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದರು.
22 ದಿನವಾದರೂ ಬಹಿರಂಗವಾಗದ ವರದಿ
ಸಮಿತಿ ವರದಿಯಲ್ಲಿ ಏನಿದೆ? ಎಂಬುದು ಪಾಲಿಕೆ ಸದಸ್ಯರು, ಸಾರ್ವಜನಿಕರು ತಿಳಿಯಬೇಕೆಂದು ಆಗಸ್ಟ್ 8ರಂದು ಮೇಯರ್ ಮತ್ತು ಆಯುಕ್ತರಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರ ನಿಯೋಗ ಭೇಟಿ ನೀಡಿತ್ತು. 22 ದಿನಗಳು ಕಳೆದರೂ ಯಾವುದೇ ವರದಿಯನ್ನು ಬಹಿರಂಗಪಡಿಸದೇ ಇರುವುದು ಖಂಡನಿಯ ಎಂದು ಪ್ರತಿಭಟನೆನಿರತರು ತಿಳಿಸಿದ್ದಾರೆ.
ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಆರ್.ಸಿ. ನಾಯ್ಕ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ ಇದ್ದರು.

https://suddikanaja.com/2021/11/23/bike-spare-part-theft-in-shivamogga-city-center-mall/

Leave a Reply

Your email address will not be published. Required fields are marked *

error: Content is protected !!