ಸುದ್ದಿ ಕಣಜ.ಕಾಂ | DISTRICT | 01 SEPT 2022
ಶಿವಮೊಗ್ಗ: ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಸೆಪ್ಟೆಂಬರ್ 2ರಿಂದ 6ರ ವರೆಗೆ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಸೆ.1ರಂದು ಆರೆಂಜ್ ಅಲರ್ಟ್ ಇದ್ದು, ಮಧ್ಯಾಹ್ನದಿಂದ ಭಾರಿ ಮಳೆ ಸುರಿದಿದೆ. ರಾತ್ರಿಯೂ ಮಳೆಯಾಗುವ ಸಾಧ್ಯತೆ ಇದೆ.
READ | ನಾಳೆ ನಡೆಯಬೇಕಿದ್ದ ಡಿಪ್ಲೋಮಾ ಥಿಯರಿ ಪರೀಕ್ಷೆ ಮುಂದೂಡಿಕೆ, ಯಾವಾಗ ನಡೆಯಲಿದೆ ಪರೀಕ್ಷೆ?
ತಾಲೂಕುವಾರು ಮಳೆಯ ವಿವರ (ಎಂಎಂಗಳಲ್ಲಿ)
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 22 ಎಂಎಂ ಮಳೆಯಾಗಿದೆ. ಶೇ.195ರಷ್ಟು ಅಧಿಕ ಮಳೆಯಾಗಿದೆ. ಭದ್ರಾವತಿಯಲ್ಲಿ 14.8, ಹೊಸನಗರ 32.4, ಸಾಗರ 27.6, ಶಿಕಾರಿಪುರ 26.6, ಶಿವಮೊಗ್ಗ 20.4, ಸೊರಬ 47.5, ತೀರ್ಥಹಳ್ಳಿ 22.4 ಮಳೆಯಾಗಿದೆ.