ಸುದ್ದಿ ಕಣಜ.ಕಾಂ | DISTRICT | 20 OCT 2022
ಶಿವಮೊಗ್ಗ(Shivamogga): ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 20 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಪೊಲೀಸ್ ಚೌಕಿ, ಚೇತನ ಪಾರ್ಕ್, ಹುಚ್ಚರಾಯ ಕಾಲೋನಿ, ವೀರಣ್ಣ ಲೇಔಟ್, ಬೊಮ್ಮನಕಟ್ಟೆ ರಸ್ತೆ, ಮೇದಾರಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
https://suddikanaja.com/2022/10/19/bs-yediyurappa-delegation-meat-central-minister-at-newdelhi/