HIGHLIGHTS
- ದೀಪಾವಳಿ ಹಬ್ಬದಲ್ಲಿ ಹೆಚ್ಚಿನ ಜನದಟ್ಟಣೆ ಇರುವ ಮಾರ್ಗಗಳಿಗೆ ವಿಶೇಷ ರೈಲುಗಳ ಸೇವೆ ಕಲ್ಪಿಸಿದ ನೈರುತ್ಯ ರೈಲ್ವೆ
- ಪ್ರಯಾಣಿಕರು ರೈಲುಗಳ ಸೇವೆಯನ್ನು ಪಡೆದುಕೊಳ್ಳುವಂತೆ ಮನವಿ
ಸುದ್ದಿ ಕಣಜ.ಕಾಂ | KARNATAKA | 20 OCT 2022
ಶಿವಮೊಗ್ಗ(Shivamogga): ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ-ಯಶವಂತಪುರ ನಡುವೆ ವಿಶೇಷ ರೈಲು ಸೇವೆ ನೀಡಲಾಗಿದ್ದು, ಇದರ ಪ್ರಯೋಜನ ಪಡೆಯುವಂತೆ ನೈರುತ್ಯ ರೈಲ್ವೆ ತಿಳಿಸಿದೆ.
ರೈಲಿನ ವೇಳಾಪಟ್ಟಿ
ರೈಲು ಸಂಖ್ಯೆ 06507 ಯಶವಂತಪುರ(Yashwanthpura)- ಶಿವಮೊಗ್ಗ ಟೌನ್ (shimoga town) ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಯಶವಂತಪುರ ನಿಲ್ದಾಣದಿಂದ ಬೆಳಗ್ಗೆ 10:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 3:30 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (ಬೆಳಗ್ಗೆ 11:14/ 11:15), ಅರಸೀಕೆರೆ (ಮಧ್ಯಾಹ್ನ 12:33/12:34), ಬೀರೂರು (ಮಧ್ಯಾಹ್ನ 1:23/ 1:25) ಮತ್ತು ಭದ್ರಾವತಿ (ಮಧ್ಯಾಹ್ನ 2:18/ 2:20) ನಿಲ್ದಾಣಗಳಲ್ಲಿ ಆಗಮಿಸಿ/ ನಿರ್ಗಮಿಸಲಿದೆ.
ಈ ರೈಲಿನಲ್ಲಿರುವ ಬೋಗಿಗಳಷ್ಟು?
ಈ ರೈಲಿನಲ್ಲಿ (06507) ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳನ್ನು ಒಳಗೊಂಡಿರುವ ಹದಿನಾಲ್ಕು ಬೋಗಿಗಳಿವೆ.
ದಟ್ಟಣೆ ತಪ್ಪಿಸಲು ರಾಜ್ಯದ ವಿವಿಧೆಡೆ ವಿಶೇಷ ರೈಲು
ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ನೈರುತ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳನ್ನು ಬೇಡಿಕೆಯ ಮೇರೆಗೆ ಓಡಿಸಲು ನಿರ್ಧರಿಸಿದೆ.
READ | ಪೆಟ್ ಲವರ್ಸ್’ಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್!
- Yashwanthapura- Hubballi | ರೈಲು ಸಂಖ್ಯೆ 06271 ಯಶವಂತಪುರ – ಎಸ್ಎಸ್ಎಸ್ ಹುಬ್ಬಳ್ಳಿ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 21 ರಂದು ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 2:30 ಗಂಟೆಗೆ ಹೊರಟು ಅದೇ ದಿನ ರಾತ್ರಿ 9:50 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (3:20/03:22 PM), ಅರಸೀಕೆರೆ (4:37/ 4:39 PM), ದಾವಣಗೆರೆ (6:38/ 6:40 PM), ರಾಣಿಬೆನ್ನೂರ (7:09/ 7:10 PM) ಮತ್ತು ಎಸ್.ಎಮ್.ಎಮ್ ಹಾವೇರಿ (7:25/ 7:27 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
- ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06272 ಎಸ್.ಎಸ್.ಎಸ್ ಹುಬ್ಬಳ್ಳಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗಿನ ಜಾವ 1:00 ಗಂಟೆಗೆ ಹೊರಟು ಅದೇ ದಿನ ಬೆಳಗ್ಗೆ 8:50 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಎಸ್ಎಮ್ಎಮ್ ಹಾವೇರಿ (02:18/02:20 AM), ರಾಣಿಬೆನ್ನೂರು (02:48/02:50 AM), ದಾವಣಗೆರೆ (03:28/03:30 AM), ಅರಸೀಕೆರೆ (05:35/05:40 AM) ಮತ್ತು ತುಮಕೂರು (07:00/07:02 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸುತ್ತದೆ.
- ಈ ರೈಲು (06271/06272) ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳನ್ನು ಒಳಗೊಂಡಿರುವ ಹದಿನಾಲ್ಕು ಬೋಗಿಗಳನ್ನು ಹೊಂದಿರುತ್ತದೆ.
- Yashwanthpura- Belagavi | ರೈಲು ಸಂಖ್ಯೆ 06505 ಯಶವಂತಪುರ – ಬೆಳಗಾವಿ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 21 ಮತ್ತು 22 ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಹೊರಟು ಮರು ದಿನ ಬೆಳಗ್ಗೆ 9:25 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (12:15/12:17 AM), ಅರಸೀಕೆರೆ (1:27/ 1:32 AM), ಕಡೂರು (2:05/ 2:07 AM), ಚಿಕ್ಕಜಾಜೂರ (2:57/ 2:59 AM), ದಾವಣಗೆರೆ (3:35/ 3:37 AM), ರಾಣಿಬೆನ್ನೂರ (4:12/ 4:13 AM), ಎಸ್.ಎಮ್.ಎಮ್ ಹಾವೇರಿ (4:40/ 4:41 AM), ಎಸ್.ಎಸ್.ಎಸ್ ಹುಬ್ಬಳ್ಳಿ (6:15/ 6:25 AM), ಧಾರವಾಡ (6:50/ 6:52 AM), ಲೋಂಡಾ (8:07/ 8:08 AM) ಮತ್ತು ಖಾನಾಪುರ (8:32/ 8:33 AM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
- ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06506 ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಬೆಳಗಾವಿ ನಿಲ್ದಾಣದಿಂದ ಬೆಳಗ್ಗೆ 11:10 ಗಂಟೆಗೆ ಹೊರಟು ಅದೇ ದಿನ ರಾತ್ರಿ 10:00 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಖಾನಾಪುರ (11:35/ 11:36 AM), ಲೋಂಡಾ (12:04/ 12:05 PM), ಧಾರವಾಡ (1:24/ 1:26 PM), ಎಸ್.ಎಸ್.ಎಸ್ ಹುಬ್ಬಳ್ಳಿ (3:10/ 3:20 PM), ಎಸ್.ಎಮ್.ಎಮ್ ಹಾವೇರಿ (4:29/ 4:30 PM), ರಾಣಿಬೆನ್ನೂರ (4:59/ 5:00 PM), ದಾವಣಗೆರೆ (5:43/ 5:45 PM), ಚಿಕ್ಕಜಾಜೂರ್ (6:15/ 6:17 PM), ಕಡೂರು (7:13/ 7:15 PM), ಅರಸೀಕೆರೆ (7:45/ 7:50 PM) ಮತ್ತು ತುಮಕೂರು (9:10/ 9:12 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
- ಈ ರೈಲು (06505/06506) ಒಂದು 2ನೇ ಹವಾನಿಯಂತ್ರಿತ ದರ್ಜೆ, ಏಳು 3ನೇ ಹವಾನಿಯಂತ್ರಿತ ದರ್ಜೆ, ಏಳು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳೊಂದಿಗೆ ಜನರೇಟರ್ ಕಾರ್ ಒಳಗೊಂಡಿರುವ ಹದಿನೇಳು ಬೋಗಿಗಳನ್ನು ಹೊಂದಿರುತ್ತದೆ.
- Belagavi- Yashwanthapura | ರೈಲು ಸಂಖ್ಯೆ 07305 ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ (superfast) ವಿಶೇಷ ಎಕ್ಸ್ಪ್ರೆಸ್ (special express) ಅಕ್ಟೋಬರ್ 26 ರಂದು ಬೆಳಗಾವಿ ನಿಲ್ದಾಣದಿಂದ ರಾತ್ರಿ 10:00 ಗಂಟೆಗೆ ಹೊರಟು ಮರು ದಿನ ಬೆಳಗ್ಗೆ 8:50 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಖಾನಾಪುರ (10:23/10:24 PM) ಲೋಂಡಾ (10:50/10:52 PM), ಧಾರವಾಡ (12:15/12:17 AM), ಎಸ್ ಎಸ್ ಎಸ್ ಹುಬ್ಬಳ್ಳಿ (12:45/12:55 AM), ಎಸ್.ಎಮ್.ಎಮ್ ಹಾವೇರಿ (2:18/ 2:20 AM), ರಾಣಿಬೆನ್ನೂರ (2:48/ 2:50 AM), ಹರಿಹರ (3:10/ 3:12 AM), ದಾವಣಗೆರೆ (03:28/03:30 AM), ಚಿಕ್ಕಜಾಜೂರ (4:08/ 4:10 AM), ಬೀರೂರು (4:53/ 4:55 AM), ಅರಸೀಕೆರೆ (5:35/ 5:40 AM), ತಿಪಟೂರು (6:00/ 6:02 AM) ಮತ್ತು ತುಮಕೂರು (7:00/ 7:02 AM) ನಿಲ್ದಾಣಗಳಲ್ಲಿಆಗಮಿಸಿ/ ನಿರ್ಗಮಿಸುತ್ತದೆ.
- ಈ ರೈಲು (07305) ಒಂದು 2ನೇ ಹವಾ ನಿಯಂತ್ರಿತ ದರ್ಜೆ, ಏಳು 3ನೇ ಹವಾನಿಯಂತ್ರಿತ ದರ್ಜೆ, ಏಳು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳೊಂದಿಗೆ ಜನರೇಟರ್ ಕಾರ್ ಒಳಗೊಂಡಿರುವ ಹದಿನೇಳು ಬೋಗಿಗಳನ್ನು ಹೊಂದಿರುತ್ತದೆ.
https://suddikanaja.com/2022/10/19/bs-yediyurappa-delegation-meat-central-minister-at-newdelhi/