State committee | ಅಡಿಕೆ ಸೇರಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನಕ್ಕೆ ರಾಜ್ಯಮಟ್ಟದ ಸಮಿತಿ ರಚನೆ, 15 ದಿನಗಳ ಡೆಡ್‍ಲೈನ್

Ramesh Hegde

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ-KPCC)ಯು ಮಲೆನಾಡು (Malenadu) ರೈತರ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿಯನ್ನು ರಚಿಸಿದ್ದು, ಕೂಲಂಕಶವಾಗಿ ಪರಿಶೀಲಿಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಗಡುವು ನೀಡಲಾಗಿದೆ.

TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳ ಕಣಜ ಇಲ್ಲಿದೆ

ಸಮಿತಿಯಲ್ಲಿ ಯಾರ್ಯಾರಿದ್ದಾರೆ?
ತಾಂತ್ರಿಕ ಸಮಿತಿಯಲ್ಲಿ ಕಾಂಗ್ರೆಸ್ ಮುಖಂಡ, ಪಾಲಿಕೆ ಸದಸ್ಯ, ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ (BA Ramesh hegde) ಅವರನ್ನು ಸಂಯೋಜಕರಾಗಿ ನಿಯೋಜನೆ ಮಾಡಲಾಗಿದೆ. ಇವರ ನೇತೃತ್ವದಲ್ಲಿ 9 ಜನರ ಸಮಿತಿಯನ್ನು ರಚಿಸಲಾಗಿದೆ.
ಉತ್ತರ ಕನ್ನಡದ ವಕೀಲ ರವೀಂದ್ರ ನಾಯಕ್, ಸಾಗರದ ಡಿಸಿಸಿ ಮಾಜಿ ಅಧ್ಯಕ್ಷ ಟಿ.ಎನ್.ಶ್ರೀನಿವಾಸ್, ಮೂಡಿಗೆರೆಯ ಬಿ.ಎಸ್.ಜಯರಾಮ್, ಸಾಗರದ ಬಿ.ಆರ್.ಜಯಂತ್, ಶಿವಮೊಗ್ಗದ ಎನ್.ಪಿ. ಧರ್ಮರಾಜ್, ಕೊಡಗುದ ರಾಮು, ಬಾಳೆಮನೆಯ ಎಚ್.ಎಂ.ನಟರಾಜ್ ಹಾಗೂ ಕಿಶೋರ್ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಿತಿ ರಚನೆಯ ಉದ್ದೇಶ
ಕೇಂದ್ರ ಅರಣ್ಯ ಹಕ್ಕು ಕಾಯ್ದೆ, ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕಿನ ಕಾಯ್ದೆ, ಸಮರ್ಪಕ ಅನುಷ್ಠಾನ, ಬಗರ್ ಹುಕುಂ ಸಮಸ್ಯೆ ಹಾಗೂ ಅಡಿಕೆ ಬೆಳೆಗಾರ ಸಮಸ್ಯೆ ಕುರಿತಂತೆ ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಲಾಗಿದೆ.

error: Content is protected !!