
ಸುದ್ದಿ ಕಣಜ.ಕಾಂ ಸಾಗರ
SAGAR: ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಮನೆಯಿಂದ ಕಾಣೆಯಾದ ವಿಚಾರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಕೊನೆಗೂ ಈ ಬೆಕ್ಕು ವ್ಯಕ್ತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಿಂದಾಗಿ ಮಾಲೀಕನ ಮನೆ ಸೇರಿದೆ.
READ |ಫುಟ್ಪಾತ್ ಮೇಲೆ ನಿಂತಿದ್ದವನ ಮೇಲೆ ಗೂಳಿ ಅಟ್ಯಾಕ್
ನಡೆದಿದ್ದೇನು?
ಸಾಗರದ ನೆಹರೂ ನಗರ ನಿವಾಸಿ ಸಮೀರ್ ಎಂಬುವವರು ಬೆಕ್ಕನ್ನು ಸಾಕಿದ್ದು, ಅದು ಏಕಾಏಕಿ ಮಂಗಳವಾರದಿಂದ ನಾಪತ್ತೆಯಾಗಿದೆ. ಇದಕ್ಕಾಗಿ ಅವರು ಎಲ್ಲೆಡೆ ಹುಡುಕಾಟ ನಡೆದಿದ್ದಾರೆ. ಆದರೆ, ಬೆಕ್ಕು ಮಾತ್ರ ಸಿಕ್ಕಿರಲಿಲ್ಲ. ಅದರ ಭಾವಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಹುಡುಕಿಕೊಡುವಂತೆ ಮನವಿ ಮಾಡಿದ್ದರು.
ಸಿಕ್ಕಿದ್ದು ಹೇಗೆ?
ಸಾಗರದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಶಂಶುದ್ದಿನ್ ಎಂಬುವವರು ಹೋಗುತ್ತಿದ್ದಾಗ ಕಾಣೆಯಾಗಿದ್ದ ಬೆಕ್ಕು ರಸ್ತೆಯ ಮೇಲಿಂದ ಸಾಗುತ್ತಿತ್ತು. ತಕ್ಷಣ ಅದನ್ನು ಹಿಡಿದು ಸಮೀರ್ ಅವರಿಗೆ ತಲುಪಿಸಿದ್ದಾರೆ. ಪ್ರಾಮಾಣಿಕತೆಯಿಂದ ಬೆಕ್ಕು ತಂದು ತಲುಪಿಸಿದ್ದಕ್ಕೆ ಬಹುಮಾನ ನೀಡಲು ಮುಂದಾದಾಗ ಶಂಶುದ್ದಿನ್ ಅವರು ಅದನ್ನು ಸಹ ತಿರಸ್ಕರಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
Police release video | ಶಿರಾಳಕೊಪ್ಪ ಗೋಡೆಬರಹ ಪ್ರಕರಣ, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್